
ಟ್ವಿಟರ್‌ನಲ್ಲಿ ಪತ್ರಕರ್ತರೊಬ್ಬರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸಮವಸ್ತ್ರದಲ್ಲಿರುವ ಕೆಲವು ಪೊಲೀಸ್ ಅಧಿಕಾರಿಗಳು ರೈಲು ಕೋಚ್‌ನೊಳಗೆ ಗಲಾಟೆಯನ್ನು ಸೃಷ್ಟಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ವರದಿಯ ಪ್ರಕಾರ, ಭಾಗಲ್ಪುರ್ ಜಂಕ್ಷನ್ ಮತ್ತು ಜಮ್ಮು ತಾವಿಯಿಂದ ಪ್ರಯಾಣಿಕರನ್ನು ಸಾಗಿಸುವ ಅಮರನಾಥ್ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಪೊಲೀಸರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.
ಮಾರ್ಚ್ 10 ರಂದು ಟ್ವಿಟರ್ ಬಳಕೆದಾರ ರಾಜೇಶ್ ಸಿಂಗ್ ಅವರು ಇದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ಇದನ್ನು ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
“ನಾನು ಅಮರನಾಥ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತೆಗೆದ ವಿಡಿಯೋ. ಯುಪಿ ಪೊಲೀಸರು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದು ಮಾತ್ರವಲ್ಲದೇ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್‌ನೊಂದಿಗೆ ಅನುಚಿತವಾಗಿ ವರ್ತಿಸಿದರು” ಎಂದು ಟ್ವಿಟರ್‌ನಲ್ಲಿ ಬರೆಯಲಾಗಿದೆ.
ಸರಿಯಾದ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಕ್ಕಾಗಿ ಸಿಕ್ಕಿಬಿದ್ದ ನಂತರ ಮೂವರು ಪೊಲೀಸರು ಟಿಟಿಇಯೊಂದಿಗೆ ಜಗಳವಾಡುವುದನ್ನು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ವೀಡಿಯೊ ಸೆರೆಹಿಡಿಯಲಾಗಿದೆ.