alex Certify ಡಾಬಾಗೆ ನುಗ್ಗಿಬಂದ ಟೆಂಪೋ, ಮೂವರ ಸ್ಥಿತಿ ಗಂಭೀರ; ಎದೆನಡುಗಿಸುವ ದೃಶ್ಯ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾಬಾಗೆ ನುಗ್ಗಿಬಂದ ಟೆಂಪೋ, ಮೂವರ ಸ್ಥಿತಿ ಗಂಭೀರ; ಎದೆನಡುಗಿಸುವ ದೃಶ್ಯ ಸೆರೆ

ಗುಜರಾತಿನ ಸೂರತ್‌ನಲ್ಲಿ ವೇಗವಾಗಿ ಬಂದ ಪಿಕಪ್ ವಾಹನವೊಂದು ರಸ್ತೆ ಬದಿಯ ಡಾಬಾಗೆ ನುಗ್ಗಿದ್ದರ ಪರಿಣಾಮ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಪಿಕಪ್ ವಾಹನ ಸೇರಿದಂತೆ ಡಾಬಾ ನಜ್ಜುಗುಜ್ಜಾಗಿದ್ದು ಕೆಲವರಿಗೆ ಗಂಭೀರ ಗಾಯಗಳಾಗಿವೆ. ಸೂರತ್‌ನ ಸರೋಲಿ ಪ್ರದೇಶದಲ್ಲಿನ ರಸ್ತೆಬದಿಯ ಡಾಬಾದಲ್ಲಿ ಈ ಘಟನೆ ನಡೆದಿದೆ.

ವೇಗವಾಗಿ ಬಂದ ಪಿಕಪ್ ವಾಹನ ರೆಸ್ಟೋರೆಂಟ್‌ಗೆ ನುಗ್ಗಿದ್ದರಿಂದ ಡಾಬಾದ ಗೋಡೆ, ಪೀಠೋಪಕರಣಗಳು ನಜ್ಜುಗುಜ್ಜಾಗಿವೆ. ಘಟನೆಯಿಂದ ಹಲವು ಜನರು ಗಾಯಗೊಂಡಿದ್ದಾರೆ. ವರದಿಯ ಪ್ರಕಾರ ಚಾಲಕ ಪಿಕ್-ಅಪ್ ವಾಹನದ ನಿಯಂತ್ರಣ ಕಳೆದುಕೊಂಡು ರೆಸ್ಟೋರೆಂಟ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಅವಘಡದಲ್ಲಿ ಡಾಬಾದೊಳಗೆ ಕುಳಿತಿದ್ದ ಸುಮಾರು ಎರಡರಿಂದ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವೇಳೆ ಸುಮಾರು 8 ರಿಂದ 10 ಗ್ರಾಹಕರು ಡಾಬಾದಲ್ಲಿ ಇದ್ದರು.

ವರದಿಗಳ ಪ್ರಕಾರ ಪಿಕಪ್ ವಾಹನ ಖಾಲಿಯಿದ್ದು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...