ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದಾಳಿ ಮಾಡಿ ಹಲ್ಲೆಗೆ ಯತ್ನಿಸಲಾಗಿದೆ. ಪಾಟ್ನಾ ಜಿಲ್ಲೆಯ ಭಕ್ತಿಯಾರ್ ಪುರದಲ್ಲಿ ಘಟನೆ ನಡೆದಿದೆ. ಕೂಡಲೇ ವ್ಯಕ್ತಿಯನ್ನು ಹಿಡಿದುಕೊಂಡ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂಬ ಮಾಹಿತಿ ಗೊತ್ತಾಗಿದೆ.
ಭುಕ್ತಿಯಾರ್ ಪುರ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಸ್ವಾತಂತ್ರ ಹೋರಾಟಗಾರ ಶೀಲಭದ್ರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸುತ್ತಿದ್ದ ನಿತೀಶ್ ಕುಮಾರ್ ಅವರನ್ನು ಹಿಂದಿನಿಂದ ಓಡಿ ಬಂದ ವ್ಯಕ್ತಿ ಬೆನ್ನಿಗೆ ಕೈಹಾಕಿ ತಳ್ಳಲು ಯತ್ನಿಸಿದ್ದಾನೆ. ಅವರನ್ನು ದೂಡಿ ಹಲ್ಲೆ ಮಾಡಲು ಮುಂದಾಗುತ್ತಿದ್ದಂತೆ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಹಲ್ಲೆಕೋರ ವ್ಯಕ್ತಿಯನ್ನು ಚಿನ್ನದ ವ್ಯಾಪಾರಿ ಶಂಕರ ಸಾಹ್ ಎಂದು ಗುರುತಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗಿದೆ. ಶಂಕರ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.