ಕೇರಳ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಪಥನಂತಿಟ್ಟ ಜಿಲ್ಲೆಯ ಕಿಝವಲ್ಲೂರು ಬಳಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಭಯಾನಕ ವಿಡಿಯೋ ವೈರಲ್ ಆಗಿದೆ.
ವೀಡಿಯೊದಲ್ಲಿ ಬಸ್ ಕಾರಿಗೆ ಡಿಕ್ಕಿ ಹೊಡೆದು ಹತ್ತಿರದ ಚರ್ಚ್‌ನ ಗೋಡೆಯನ್ನು ಒಡೆಯುತ್ತಿರುವುದನ್ನು ನೋಡಬಹುದಾಗಿದೆ. ಈ ಘಟನೆ ಆವರಣದಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಬಸ್ಸು ರಸ್ತೆಯ ಮಧ್ಯೆ ಬರುತ್ತಿರುವ ಸಮಯದಲ್ಲಿ ಇನ್ನೊಂದು ಕಡೆಯಿಂದ ಬರುತ್ತಿದ್ದ ಕಾರು ಕೂಡ ರಸ್ತೆಯ ಮಧ್ಯೆಯೇ ಇರುವುದನ್ನು ನೋಡಬಹುದು. ಬಸ್ಸಿನ ಎದುರುಗಡೆ ಒಂದು ಕಾರು ಬರುತ್ತಿತ್ತು. ಆ ಕಾರನ್ನು ಹಿಂದಿಕ್ಕಿದ ಬಸ್ಸು ವೇಗದಲ್ಲಿ ಬರುತ್ತಿರುವುದನ್ನು ಕಾಣಬಹುದು. ಇತ್ತ ಕಡೆಯಿಂದ ವೇಗದಲ್ಲಿ ಕಾರು ಬರುತ್ತಿದೆ. ಬಸ್ಸು ಕಾರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿರುವ ಚರ್ಚ್ ಗೋಡೆಗೆ ಹೋಗಿ ಹೊಡೆದಿದೆ.
ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿದ್ದು, ಕೊನ್ನಿ ತಾಲೂಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಎರಡೂ ವಾಹನಗಳ ಚಾಲಕರ ಸ್ಥಿತಿ ಚಿಂತಾಜನಕವಾಗಿ ಎನ್ನಲಾಗಿದೆ.