ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಮಾನಸಿಕ ಅಸ್ವಸ್ಥನೊಬ್ಬ ರೈಲ್ವೆ ನಿಲ್ದಾಣದಲ್ಲಿ ಕಬ್ಬಿಣದ ಪಿಲ್ಲರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ ಪ್ರಸಂಗ ನಡೆದಿದೆ. ಮಾಹಿತಿ ಪ್ರಕಾರ ವ್ಯಕ್ತಿ ಕಂಬ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ.
ವ್ಯಕ್ತಿ ಕಂಬವನ್ನು ಹತ್ತಿದ ನಂತರ, ಸಿಎಸ್‌ಎಂಟಿ ರೈಲ್ವೆ ನಿಲ್ದಾಣದ ಆಡಳಿತವು ಆತನಿಗೆ ಗಾಯವಾಗುವುದನ್ನು ತಡೆಯಲು ಓವರ್‌ಹೆಡ್ ವೈರ್‌ನಲ್ಲಿನ ವಿದ್ಯುತ್ ಅನ್ನು ಸ್ವಿಚ್ ಆಫ್ ಮಾಡಿದೆ.
ಅಗ್ನಿಶಾಮಕ ದಳದವರು ವ್ಯಕ್ತಿಯನ್ನು ಕೆಳಗಿಳಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ಆತ ಕದಲಲು ನಿರಾಕರಿಸಿದ. ನಂತರ ಅಗ್ನಿಶಾಮಕ ದಳದವರು ಸ್ವತಃ ಹತ್ತಿ ಅವನನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಇದೇ ವೇಳೆ ವ್ಯಕ್ತಿಯನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದು ಕಂಬ ಹತ್ತಿದ ಕಾರಣಕ್ಕೆ ವಿಚಾರಣೆ ನಡೆಸುತ್ತಿದ್ದಾರೆ.