ಭಿವಾನಿ: ಹರಿಯಾಣದ ಭಿವಾನಿಯಲ್ಲಿ ಮಹಿಳೆಯಿಂದ 5,000 ರೂಪಾಯಿ ಲಂಚ ಸ್ವೀಕರಿಸಿರುವ ಆರೋಪದ ಮೇಲೆ ಹರಿಯಾಣ ಪೊಲೀಸ್‌ನ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಬಂಧಿತರಾಗಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಾಮಗಾರಿಗೆ 5,000 ರೂಪಾಯಿ ಲಂಚ ನೀಡುವಂತೆ ಸಬ್‌ಇನ್ಸ್‌ಪೆಕ್ಟರ್ ಕೇಳಿದ್ದು, ಈ ಕುರಿತು ಮಹಿಳೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಎಸಿಬಿ ತಂಡ ರಚಿಸಿ ಸಬ್ ಇನ್ಸ್ ಪೆಕ್ಟರ್ ಅವರನ್ನು ಹಿಡಿಯಲು ಬಲೆ ಬೀಸಿದ್ದು ನಂತರ ಅರೆಸ್ಟ್ ಮಾಡಿದೆ.
ಸಬ್ ಇನ್ಸ್ ಪೆಕ್ಟರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ, ಎನ್‌ಜಿಒ, ಸಂವಿಧಾನ ಮತ್ತು ಕಾನೂನು ನೀಡಿರುವ ಹಕ್ಕುಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲು ಕೆಲಸ ಮಾಡುತ್ತಿದೆ.