ಗುಜರಾತ್‌ನ ಸೂರತ್‌ನಲ್ಲಿ ಮಹಿಳೆಯೊಬ್ಬರು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದು, ಇದರ ಘಟನೆ ವೈರಲ್ ಆಗಿದೆ. ಸಂತ್ರಸ್ತೆಯ ಮಗ ಘಟನೆಯನ್ನು ಚಿತ್ರೀಕರಿಸಿ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ವರದಿಯಾಗಿದೆ.
ಈ ದೃಶ್ಯದಲ್ಲಿ ಮಹಿಳೆ ಮತ್ತು ಆಕೆಯ ಅತ್ತೆಯ ನಡುವೆ ಹಿಂಸಾತ್ಮಕ ಜಗಳವನ್ನು ನೋಡಬಹುದು. ಇಬ್ಬರ ನಡುವೆ ವಾದ ನಡೆಯುತ್ತಿದ್ದು, ಇಬ್ಬರು ಮಕ್ಕಳು ಸೋಫಾದಲ್ಲಿ ಕುಳಿತಿರುವುದನ್ನು ನೋಡಬಹುದು. ಘಟನೆಯ ಉದ್ದಕ್ಕೂ, ಸಂತ್ರಸ್ತೆಯ ಪತಿ ಆಕ್ರಮಣದಿಂದ ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಆರೋಪಿಯು ಈಗಾಗಲೇ ಸೂರತ್‌ನಲ್ಲಿ ಒಂದು ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾಳೆ ಮತ್ತು ಈಗ ಅದೇ ಗ್ರಾಮದ ಇನ್ನೊಂದು ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ಇದರಿಂದಾಗಿ ಅತ್ತೆ- ಸೊಸೆಯ ನಡುವೆ ಗಲಾಟೆ ಆಗಿದೆ ಎಂದು ತನಿಖೆಯ ಸಮಯದಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.
ಪತಿ ಮತ್ತು ಮಾವನ ವಿರುದ್ಧವೂ ವರದಕ್ಷಿಣೆ ಪ್ರಕರಣ ದಾಖಲಿಸಿದ್ದರು. ಆಸ್ತಿಯನ್ನು ಭದ್ರಪಡಿಸಿಕೊಳ್ಳಲು ಅವರ ಮನೆಯಲ್ಲಿ ಅತ್ತೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರು.