ಚಿರತೆಯನ್ನು ಹಿಮ್ಮೆಟ್ಟಿಸಿದ ಎಮ್ಮೆ; ಹುಬ್ಬೇರಿಸುವಂತ ವಿಡಿಯೋ ಇಲ್ಲಿದೆ ನೋಡಿ 11-03-2023 8:11AM IST / No Comments / Posted In: Latest News, India, Live News ಚಿರತೆಯನ್ನ ಎಮ್ಮೆ ಎದುರಿಸುವುದನ್ನ ನೀವು ನೋಡಿದ್ದೀರಾ? ಇಂತಹ ವಿಷಯವನ್ನ ನೀವು ಕೇಳಿದ್ರೂ ಅಚ್ಚರಿ ಪಡ್ತೀರ ಅಲ್ವಾ? ಆದರೆ ಅಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಚಿರತೆಯೊಂದು ಎಮ್ಮೆಗಳ ದಾಳಿಗೆ ಬೆದರಿ ಓಡಿಹೋಗಿ ಪೊದೆಯಲ್ಲಿ ಕಣ್ಮರೆಯಾಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಚಿರತೆಯನ್ನ ಹಲವಾರು ಎಮ್ಮೆಗಳು ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಮೊದಲು ಚಿರತೆ ಎಮ್ಮೆಯೊಂದರ ಮೇಲೆ ದಾಳಿ ಮಾಡಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸ್ಥಳೀಯರೊಬ್ಬರು ಸೆರೆಹಿಡಿದ ವೀಡಿಯೊದಲ್ಲಿ ಬಲ್ಲಾರ್‌ಪುರ ಇಂಡಸ್ಟ್ರೀಸ್ ಲಿಮಿಟೆಡ್ (ಬಿಐಎಲ್‌ಟಿ) ಬಳಿಯ ನಿರ್ಜನ ಹಾದಿಯಲ್ಲಿ ಕೆಲವು ಎಮ್ಮೆಗಳು ಹಾದುಹೋಗುತ್ತಿರುವ ವೇಳೆ ಚಿರತೆಯೊಂದು ಎಮ್ಮೆಯೊಂದರ ಮೇಲೆ ದಾಳಿ ಮಾಡುತ್ತದೆ. ಬಳಿಕ ಎಮ್ಮೆಗಳ ಗುಂಪು ಚಿರತೆಯ ಹಿಂದೆ ಓಡುತ್ತಿದ್ದಂತೆ ಚಿರತೆ ಪೊದೆ ಕಡೆ ಓಡಿಹೋಗುತ್ತದೆ. Some buffaloes were seen chasing a #leopard in #Chandrapur, Maharashtra yesterday evening. Here's the video that I received via a close relative of mine whose team works in the area. @Gurupra44204672 pic.twitter.com/x0uoCHh1xI — swarna srikanth || स्वर्णा श्रीकांत (@SSwarnaSrikanth) March 10, 2023