ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿನ ಮಕ್ಕಳ ಪರಿಸರವಾದಿ ಲಿಸಿಪ್ರಿಯಾ ಕಂಗುಜಮ್ ಫೇಸ್‌ಬುಕ್ ಲೈವ್ ಮೂಲಕ ಆ ಪ್ರದೇಶದಲ್ಲಿ ದೀಪಾವಳಿಯ ಸಿದ್ಧತೆ ಚಿತ್ರೀಕರಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಯುವಕರು ಮೊಬೈಲ್ ಎಗರಿಸಿದ್ದಾರೆ.
ನಿರ್ಮಲಾ ಆಸ್ಪೈರ್ ಹೌಸಿಂಗ್ ಸೊಸೈಟಿಯ ಹೊರಗೆ ಫೇಸ್‌ಬುಕ್ ಲೈವ್ ಮೂಲಕ ಕಾರ್ಯಕರ್ತೆ ಆನ್ ಲೈನ್‌ನಲ್ಲಿದ್ದಾಗ ಇಬ್ಬರು ದುಷ್ಕರ್ಮಿಗಳು ಆಕೆಯ ಮೊಬೈಲ್ ಕಸಿದುಕೊಂಡಿದ್ದಾರೆ.
“ನನ್ನ ಮೊಬೈಲ್ ಫೋನ್ ಅನ್ನು (10 ನಿಮಿಷಗಳ ಹಿಂದೆ) ಇಬ್ಬರು ಬೈಕ್ ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ ದಯವಿಟ್ಟು ಸಹಾಯ ಮಾಡಿ” ಎಂದು 11 ವರ್ಷದ ಹುಡುಗಿ ನೋಯ್ಡಾ ಪೊಲೀಸರನ್ನು ಟ್ಯಾಗ್ ಮಾಡುವಾಗ ಟ್ವೀಟ್ ಮಾಡಿದ್ದಳು.
ಕಂಗುಜಮ್ ಭಾರತದ ಪರಿಸರ ಕಾರ್ಯಕರ್ತೆ ಮತ್ತು ‘ದ ಚೈಲ್ಡ್ ಮೂವ್‌ಮೆಂಟ್’ ಸಂಸ್ಥಾಪಕರಾಗಿದ್ದಾರೆ. ಆಕೆ ಆರನೇ ವಯಸ್ಸಿನಿಂದಲೂ ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆಯನ್ನು ಪ್ರತಿಪಾದಿಸುತ್ತಿದ್ದಾರೆ.
2019 ರ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಹವಾಮಾನ ಸಂರಕ್ಷಣೆ ಕುರಿತು ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ಹವಾಮಾನ ಬದಲಾವಣೆಯ ಕುರಿತು ಭಾಷಣ ಮಾಡಿದ್ದರು. ನಂತರ ಆಕೆಯ ಜನಪ್ರಿಯತೆ ಹೆಚ್ಚಾಯಿತು.