
ಕೇರಳದ ಕಾಸರಗೋಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪುಟ್ಟ ಬಾಲಕಿಯನ್ನು ಪಾಪಿಯೊಬ್ಬ ಎತ್ತಿ ನೆಲಕ್ಕೆ ಬಡಿದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
9 ವರ್ಷದ ಈ ಬಾಲಕಿ ಕಾಸರಗೋಡಿನ ಅಯಾವರಂ ಜುಮ್ಮಾ ಮಸೀದಿ ಬಳಿ ನಿಂತಿದ್ದ ವೇಳೆ ಏಕಾಏಕಿ ಬಂದ ಅಬೂಬಕರ್ ಸಿದ್ದಿಕಿ ಎಂಬಾತ ಆಕೆಯನ್ನು ಎತ್ತಿ ನೆಲಕ್ಕೆ ಬಡಿದಿದ್ದಾನೆ.
ಬಾಲಕಿಯೊಂದಿಗೆ ಈ ರೀತಿ ಕ್ರೂರವಾಗಿ ವರ್ತಿಸಲು ಕಾರಣವೇನೆಂಬುದು ತಿಳಿದು ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
https://youtu.be/qFLyWkih1og