ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳು ಜಗಳವಾಡಿದ ನಂತರ ಹುಡುಗ, ಪ್ರೇಯಸಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿರೋ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಜೋಡಿಯ ನಡುವೆ ವಿರಸದ ಬಳಿಕ ಜೋರು ಜಗಳವಾಗಿರೋದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಡೀ ವಿಡಿಯೋವನ್ನು ನೋಡುಗರು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.
ಪ್ರೇಮಿಗಳ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದ್ದು, ಬಳಿಕ ಹುಡುಗ ಹುಡುಗಿಗೆ ಥಳಿಸಲು ಆರಂಭಿಸಿದ.
ಈ ವೇಳೆ ಅವರ ಸ್ನೇಹಿತರು ಗಲಾಟೆ ಬಿಡಿಸಲು ಪ್ರಯತ್ನಿದ್ದಾರೆ. ಆದರೆ ಹುಡುಗಿ ನೆಲಕ್ಕೆ ಕುಸಿದು ಬಿದ್ದಾಗಲೂ ಯುವಕ ಆಕೆಗೆ ಕಪಾಳಮೋಕ್ಷ ಮಾಡಿ ಥಳಿಸಿದ್ದಾನೆ.
ಆಕೆಯನ್ನ ಒದೆಯುವುದು , ತಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಶೇರ್ ಆದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹೋದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.