
ಆಲಿಯಾ ಚಿಬಾ ತಮ್ಮ ಬಾಲ್ಯದ ದಿನಗಳ ಥ್ರೋಬ್ಯಾಕ್ ಚಿತ್ರವನ್ನು ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಆಲಿಯಾ, ಆರ್ಯನ್ ಖಾನ್ ಮತ್ತು ತನ್ನ ತಾಯಿ ನಮಿತಾ ಚಿಬಾ ಇಬ್ಬರಿಗೂ ಜನ್ಮದಿನದ ಶುಭ ಹಾರೈಸಿದ್ದಾರೆ. ಇಬ್ಬರೂ ಅತ್ಯಂತ ಪ್ರೀತಿಯ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಎಂದು ಆಲಿಯಾ ಛಿಬಾ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಆರ್ಯನ್ ಸಹೋದರಿ ಸುಹಾನಾ ಖಾನ್ ಕೂಡ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೃದಯ ಎಮೋಜಿಯೊಂದಿಗೆ ಆಲಿಯಾ ಚಿತ್ರವನ್ನು ಮರು ಪೋಸ್ಟ್ ಮಾಡಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ 1991 ರಲ್ಲಿ ಗೌರಿ ಖಾನ್ ಅವರನ್ನು ವಿವಾಹವಾಗಿದ್ದಾರೆ. 24 ವರ್ಷದ ಆರ್ಯನ್ ಖಾನ್, ಸುಹಾನಾ ಖಾನ್ (21) ಮತ್ತು 8 ವರ್ಷದ ಅಬ್ರಾಹಂಗೆ ಸ್ಟಾರ್ ದಂಪತಿ ಪೋಷಕರಾಗಿದ್ದಾರೆ. ಸುಹಾನಾ ಖಾನ್ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.