alex Certify ʼಒಮಿಕ್ರಾನ್ʼ ಸೋಂಕಿನ ಹೊಸ ಗುಣ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಒಮಿಕ್ರಾನ್ʼ ಸೋಂಕಿನ ಹೊಸ ಗುಣ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಒಮಿಕ್ರಾನ್ ರೂಪಾಂತರ ಭಾರತವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈವರೆಗೂ ಡಿಟೆಕ್ಟ್ ಆಗಿರುವ ಕೊರೋನಾ ರೂಪಾಂತರಗಳಲ್ಲಿ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ.

ಕಾಡ್ಗಿಚ್ಚಿನಂತೆ ಭಾರತಕ್ಕೆ ಹರಡುತ್ತಿರೊ ಒಮಿಕ್ರಾನ್ ಸಧ್ಯಕ್ಕೆ ಸುಮ್ಮನಾಗೊ ಲಕ್ಷಣಗಳು ಕಾಣುತ್ತಿಲ್ಲ. ಈವರೆಗೂ ದೇಶದಲ್ಲಿ 1700 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಸಂಪೂರ್ಣ ಲಸಿಕೆ ಹಾಕಿಸಿಕೊಂಡವರನ್ನು ಆವರಿಸಿಕೊಳ್ಳುತ್ತಿರುವ ಹೊಸ ವೈರಸ್ ಮಿಕ್ಕೆಲ್ಲಾ ರೂಪಾಂತರಗಳಿಗಿಂತ ವಿಭಿನ್ನವಾಗಿದೆ. ಒಮಿಕ್ರಾನ್ ಹೆಚ್ಚಾಗ್ತಿದ್ದಂತೆ ಅದರ ಗುಣಲಕ್ಷಣಗಳು ಸೂಕ್ಷ್ಮವಾಗಿ ತಿಳಿಯುತ್ತಿವೆ. ಜೊತೆಗೆ ಹೊಸ ಅಧ್ಯಯನದಲ್ಲಿ ಈ ಸೋಂಕಿನ ಎರಡು ಹೊಸ ಗುಣಲಕ್ಷಣಗಳು ಪತ್ತೆಯಾಗಿವೆ.

ಒಮಿಕ್ರಾನ್ ನ ಲಕ್ಷಣಗಳು ಯಾವುವು ?

ನಿಮಗೆ ಮೂಗು ಬೇನೆ, ತಲೆನೋವು, ಆಯಾಸ ಅಥವಾ ಶೀತದಂತಹ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮಲ್ಲೂ ಒಮಿಕ್ರಾನ್ ಸೋಂಕು ಇರುವ ಸಾಧ್ಯತೆಯಿದೆ.‌ ಒಮಿಕ್ರಾನ್ ಸೋಂಕಿನ ಲಕ್ಷಣಗಳು ಸೌಮ್ಯ ಎಂದು ಮೊದಲಿನಿಂದ ಹೇಳಲಾಗ್ತಿದ್ದರೂ ಇವು ದೀರ್ಘಕಾಲದವರೆಗೆ ಇರುತ್ತವೆ ಎಂಬುದು ವೈಜ್ಞಾನಿಕ ಅಧ್ಯಯನದಲ್ಲಿ ತಿಳಿದುಬಂದಿದೆ.

ಈಗ ಈ ಸೋಂಕಿನ ಮತ್ತೆರಡು ಸಿಂಪ್ಟಮ್ ಗಳನ್ನ ಗುರುತಿಸಲಾಗಿದ್ದು, ಜ಼ೋ ಕೋವಿಡ್ ಆ್ಯಪ್ ಮಾಹಿತಿ ಪ್ರಕಾರ ವಾಕರಿಕೆ ಹಾಗೂ ಹಸಿವಾಗದಿರುವುದು ಒಮಿಕ್ರಾನ್ ನ ಗುಣಲಕ್ಷಣ ಎನ್ನಲಾಗುತ್ತಿದೆ. ಕೊರೋನಾ ವೈರಸ್ ನ ಸಾಮಾನ್ಯ ಲಕ್ಷಣಗಳಾದ ಹೈ ಟೆಂಪರೇಚರ್, ನಿರಂತರ ಕೆಮ್ಮು, ವಾಸನೆ ಮತ್ತು ರುಚಿ ಕಳೆದುಕೊಳ್ಳುವಿಕೆಯ ಜೊತೆಗೆ ವಾಕರಿಕೆ ಹಾಗೂ ಹಸಿವಾಗದಿರುವವರನ್ನ ಮೊದಲು ಒಮಿಕ್ರಾನ್ ಟೆಸ್ಟ್ ಗೆ ಒಳಪಡಿಸುವುದು ಉತ್ತಮ ಎಂದು ಯು.ಕೆ.ಯ ರಾಷ್ಟ್ರೀಯ ಆರೋಗ್ಯ ಇಲಾಖೆ ಅಧ್ಯಯನ ತಿಳಿಸಿದೆ.

BIG NEWS: ನಳಂದ ಮೆಡಿಕಲ್​ ಕಾಲೇಜಿನ 87 ವೈದ್ಯರಿಗೆ ಕೊರೊನಾ.​..!

ಅಮೆರಿಕಾದಲ್ಲಿ ತನಿಖೆ ನಡೆಸಿದ ಮೊದಲ 43 ಪ್ರಕರಣಗಳನ್ನ CDC ವಿಶ್ಲೇಷಿಸಿದೆ. ಕೆಮ್ಮು, ಆಯಾಸ, ಉಸಿರುಗಟ್ಟುವಿಕೆ, ಮೂಗು ಸೋರುವಿಕೆ(Runny nose) ಒಮಿಕ್ರಾನ್ ನ ನಾಲ್ಕು ಸಾಮಾನ್ಯ ಲಕ್ಷಣಗಳೆಂದು CDC ಈ ಅಧ್ಯಯನದ ನಂತರ ತಿಳಿಸಿತ್ತು. ಈಗ ಹೊಸ ಗುಣಲಕ್ಷಣದ ಬಗ್ಗೆ ತಿಳಿಸಿರುವ ರೋಗ ನಿಯಂತ್ರಣ ಕೇಂದ್ರ (CDC) ಕೆಲವು ಸಂದರ್ಭಗಳಲ್ಲಿ, ಒಮಿಕ್ರಾನ್ ಸೋಂಕಿತರಲ್ಲಿ ವಾಂತಿಯ ಲಕ್ಷಣಗಳು ಕಂಡು ಬಂದಿವೆ ಎಂದು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...