![Rashtrapati Bhavan Tour For Common Public Suspended Until Further Notice](https://static.india.com/wp-content/uploads/2020/12/Rashtrapati-Bhawan.jpg)
ದೆಹಲಿಯಲ್ಲಿ ಚಳಿ ಹೆಚ್ಚುತ್ತಿರುವುದರ ಜೊತೆ ಜೊತೆಗೆ ಕೊರೋನಾ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚುತ್ತಿದೆ. ಈಗಾಗ್ಲೇ ರಾಷ್ಟ್ರರಾಜಧಾನಿಯಲ್ಲಿ ದೆಹಲಿ ಸರ್ಕಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಸಿನಿಮಾ ಮಂದಿರ, ಶಾಲಾ-ಕಾಲೇಜು ಸೇರಿದಂತೆ ಭಾಗಶಃ ದೆಹಲಿ ಬಂದ್ ಆಗಿದೆ. ಈಗ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನವದ ದರ್ಶನಕ್ಕೂ ಬ್ರೇಕ್ ಬಿದ್ದಿದೆ.
ಅಕ್ರಮ –ಸಕ್ರಮ: ರೈತರಿಗೆ ಸಿಎಂ ಸಿಹಿ ಸುದ್ದಿ
ಇಲ್ಲಿಯವರೆಗೂ ಸಾರ್ವಜನಿಕರಿಗೆ ರಾಷ್ಟ್ರಪತಿ ಭವನ ಹಾಗೂ ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯದ ದರ್ಶನದ ಅವಕಾಶವಿತ್ತು. ವಿಶೇಷವಾಗಿ ದೆಹಲಿ ಪ್ರವಾಸಕ್ಕೆ ತೆರಳುವವರು ರಾಷ್ಟ್ರಪತಿ ಭವನದ ದರ್ಶನವಿಲ್ಲದೆ ವಾಪಾಸ್ಸಾಗುತ್ತಿರಲಿಲ್ಲ. ಆದರೆ ರಾಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರಿರುವ ಕೊರೋನಾ ಸೋಂಕಿನಿಂದಾಗಿ ಭವನದ ಪ್ರವಾಸ ಹಾಗೂ ದರ್ಶನಕ್ಕೆ ಅನುಮತಿ ರದ್ದುಗೊಳಿಸಲಾಗಿದೆ. ನಾಳೆಯಿಂದ ಈ ಆದೇಶ ಕಾರ್ಯರೂಪಕ್ಕೆ ಬರಲಿದ್ದು ಪ್ರತಿವರ್ಷ ನಡೆಯುವ ಗಾರ್ಡ್ ಬದಲಾವಣೆ ಸಮಾರಂಭವು ಮುಂದಿನ ಸೂಚನೆಯವರೆಗೂ ನಡೆಯುವುದಿಲ್ಲ ಎಂದು ರಾಷ್ಟ್ರಪತಿ ಭವನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.