ಕೊರೊನಾ ವೈರಸ್ ನ ಒಮಿಕ್ರಾನ್ ಹೊಸ ರೂಪಾಂತರದ ವಿಶ್ವಾದ್ಯಂತ ಭಯ ಹುಟ್ಟಿಸಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾಗ್ತಿದೆ. ಒಮಿಕ್ರಾನ್ ಬಗ್ಗೆ ಎಚ್ಚರಿಕೆ ಸಂದೇಶ ಬರ್ತಿದ್ದಂತೆ ಭಾರತ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ವಿದೇಶದಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ, ವಿಮಾನ ನಿಲ್ದಾಣದಲ್ಲಿಯೇ ಕೊರೊನಾ ಪರೀಕ್ಷೆ ನಡೆಯಲಿದೆ. ಪ್ರಯಾಣಿಕರು ಕೊರೊನಾ ಎರಡೂ ಲಸಿಕೆ ಪಡೆದಿರಲಿ, ಬಿಡಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಒಮಿಕ್ರಾನ್ ಹೆಚ್ಚು ಕಾಡಿರುವ ದೇಶಗಳ ಪ್ರಯಾಣಿಕರಿಗೆ ಮಾತ್ರ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಒಮಿಕ್ರಾನ್ ಗಮನದಲ್ಲಿಟ್ಟುಕೊಂಡು ಅನೇಕ ದೇಶಗಳು ವಿದೇಶಿ ಪ್ರಯಾಣಕ್ಕೆ ನಿರ್ಬಂದ ಹೇರಿವೆ. ಎಲ್ಲಾ ವಿದೇಶಿ ಪ್ರಯಾಣಿಕರ ಪ್ರವೇಶವನ್ನು ಜಪಾನ್ ನಿಷೇಧಿಸಿದೆ.
ಜಪಾನ್, ದಕ್ಷಿಣ ಆಫ್ರಿಕಾ ಮತ್ತು ಇತರ ಎಂಟು ದೇಶಗಳಿಂದ ಆಗಮಿಸುವ ಜನರಿಗೆ ಪ್ರವೇಶ ನಿರ್ಬಂಧ ಬಿಗಿಗೊಳಿಸಿದೆ. ಈ ದೇಶಗಳ ಪ್ರಯಾಣಿಕರು ಸರ್ಕಾರ ಗುರುತಿಸಿದ ಕೇಂದ್ರಗಳಲ್ಲಿ 10 ದಿನಗಳವರೆಗೆ ಕ್ವಾರಂಟೈನ್ ನಲ್ಲಿರಬೇಕು. ಜಪಾನ್ ಮಾತ್ರವಲ್ಲ ಇನ್ನೂ ಅನೇಕ ದೇಶಗಳು, ದಕ್ಷಿಣ ಆಫ್ರಿಕಾ ಸೇರಿದಂತೆ ಒಮಿಕ್ರಾನ್ ರೂಪಾಂತರ ಕಾಣಿಸಿಕೊಂಡ ದೇಶಗಳ ಮೇಲೆ ನಿಷೇಧ ಹೇರಲಾಗಿದೆ.