ಕೋವಿಡ್‌ನ ಒಮಿಕ್ರಾನ್ ಅವತಾರೀ ವೈರಾಣುವಿನಿಂದ ಪೀಡಿತರಾಗಿದ್ದ ರಾಜಸ್ಥಾನದ ಒಂಬತ್ತು ರೋಗಿಗಳು ಇದೀಗ ಚೇತರಿಸಿಕೊಂಡಿದ್ದಾರೆ. ಜೈಪುರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಈ ಮಂದಿಯನ್ನು ಡಿಸೆಂಬರ್ 9, ಗುರುವಾರ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿನಿಂದ ಚೇತರಿಸಿಕೊಂಡಿರುವುದು ದೃಢಪಟ್ಟಿದೆ.
ಎಲ್ಲಾ ಒಂಬತ್ತು ಮಂದಿ ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಖುದ್ದು ಸ್ಪಷ್ಟಪಡಿಸಿದೆ. ಇವರೆಲ್ಲರ ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್ ಹಾಗೂ ಇತರೆ ಪರೀಕ್ಷೆಗಳೆಲ್ಲವೂ ಸಹಜ ಫಲಿತಾಂಶಗಳನ್ನೇ ತೋರಿವೆ. ಎಲ್ಲರಿಗೂ ಒಂದು ವಾರದ ಮಟ್ಟಿಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ವೈದ್ಯರು ಸೂಚಿಸಿದ್ದಾರೆ.
ಸಿಂಗಪುರ: ಬೂಸ್ಟರ್ ಡೋಸ್ ಪಡೆದಿದ್ದರೂ ಒಮಿಕ್ರಾನ್ ಸೋಂಕಿಗೊಳಗಾದ ಯುವತಿ
ದಕ್ಷಿಣ ಆಫ್ರಿಕಾದಿಂದ ಮರಳಿದ ಕುಟುಂಬದ 34 ಮಂದಿಯ ಸ್ಯಾಂಪಲ್‌ಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಒಂಬತ್ತು ಮಂದಿಗೆ ಒಮಿಕ್ರಾನ್ ಇರುವುದು ಪತ್ತೆಯಾಗಿತ್ತು. ಮಿಕ್ಕ 25 ಮಂದಿ ನೆಗೆಟಿವ್ ಕಂಡುಬಂದಿದ್ದರು.
ಆರೋಗ್ಯ ಇಲಾಖೆಯು ಅಲರ್ಟ್ ಆಗಿದ್ದು, ಕೊರೋನಾ ವೈರಸ್‌ನ ನಾವೆಲ್ ಅವತಾರಿ ಕಂಡುಬಂದಾಗಿನಿಂದಲೂ ಸಕ್ರಿಯವಾಗಿ ಕೆಲಸ ಮಾಡುತ್ತಲೇ ಬಂದಿದೆ ಎಂದು ರಾಜ್ಯದ ಆರೋಗ್ಯ ಸಚಿವ ಪ್ರಸಾದಿ ಲಾಲ್ ಮೀನಾ ತಿಳಿಸಿದ್ದಾರೆ.