ಕೊರೊನಾ ವೈರಸ್‌ನ ರೂಪಾಂತರದ ಒಮಿಕ್ರಾನ್ ಲಕ್ಷಣಗಳು ಇತರ ವೈರಸ್ ಗಳಿಗಿಂತ ಸೌಮ್ಯವಾಗಿರಬಹುದು, ಆದರೆ ನಾವು ಎಚ್ಚರದಿಂದಿದ್ದಾಗ ಮಾತ್ರ ವೈರಸ್ ಹರಡುವುದನ್ನು ತಡೆಯಬಹುದು. ಈ ವೈರಸ್‌ನ ವಿವಿಧ ಲಕ್ಷಣಗಳಿವೆ. ಚರ್ಮ-ತುಟಿಗಳು ಮತ್ತು ಉಗುರುಗಳ ಮೇಲೆ ಈ ಲಕ್ಷಣಗಳು ಕಂಡುಬಂದರೆ ಜಾಗರೂಕರಾಗಿರಿ. ಒಮಿಕ್ರಾನ್‌ನ ಹೊಸ ರೋಗಲಕ್ಷಣಗಳು ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಚರ್ಮ-ತುಟಿಗಳು ಮತ್ತು ಉಗುರುಗಳಲ್ಲಿ ಈ ರೋಗಲಕ್ಷಣಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಚರ್ಮ, ತುಟಿಗಳು, ಉಗುರುಗಳಲ್ಲಿ ನೀಲಿ ಬಣ್ಣ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ. ಅಮೆರಿಕದಲ್ಲಿರುವ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ಚರ್ಮ, ತುಟಿಗಳು ಮತ್ತು ಉಗುರುಗಳ ಬಣ್ಣ ನೀಲಿ-ಹಳದಿ ಮತ್ತು ಬೂದು ಬಣ್ಣಕ್ಕೆ ಬದಲಾದರೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ನೀಲಿ ಬಣ್ಣವು ನಿಮ್ಮ ದೇಹದಲ್ಲಿನ ಆಮ್ಲಜನಕದ ಮಟ್ಟವು ಕಡಿಮೆ ಇದೆ ಎಂದು ಸೂಚಿಸುತ್ತದೆ ಎಂದು ಸಿಡಿಎಸ್ ಎಚ್ಚರಿಸಿದೆ.
ಚರ್ಮ ತುಟಿ ನೀಲಿ ಬಣ್ಣಕ್ಕೆ ತಿರುಗಿದರೆ ಕೂಡಲೇ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬೆನ್ನು ನೋವು, ಧ್ವನಿಯಲ್ಲಿ ಬದಲಾವಣೆ, ಪದೆ ಪದೆ ಬೆವರುವುದು, ಸ್ನಾಯು ನೋವು ಮತ್ತು ಮೂಗು ಸೋರುವಿಕೆ ಇದಲ್ಲದೆ ಜ್ವರ, ನಿರಂತರ ಕೆಮ್ಮು ಮತ್ತು ರುಚಿ ಮತ್ತು ವಾಸನೆಯಲ್ಲಿನ ಬದಲಾವಣೆಗಳು ಕೂಡ ಒಮಿಕ್ರಾನ್ ಲಕ್ಷಣವಾಗಿದೆ.
ಪ್ರಮುಖವಾಗಿ ರೋಗ ಬರದಂತೆ ತಡೆಯಲು ವ್ಯಾಕ್ಸಿನೇಷನ್ ಬಹಳ ಮುಖ್ಯವಾಗಿದೆ. ನಿಮಗೆ ಈ ತರಹದ ಅಸ್ವಸ್ಥತೆ ರೋಗಲಕ್ಷಣಗಳು ಕಂಡುಬಂದರೆ ನೀವು ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಇತರರಿಗೂ ಹರಡದಂತೆ ಎಚ್ಚರ ವಹಿಸಿ.