ಕೊರೋನ ವೈರಸ್‌ನ ಓಮಿಕ್ರಾನ್ ರೂಪಾಂತರವು ಮಾನವರ ಚರ್ಮದ ಮೇಲೆ 21 ಗಂಟೆಗಳ ಕಾಲ ಮತ್ತು ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ ಎಂಟು ದಿನಗಳಿಗಿಂತ ಹೆಚ್ಚು ಕಾಲ ಜೀವಂತವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದ್ದು, ಈ ಕಾರಣದಿಂದಾಗಿಯೇ ಇತರ ತಳಿಗಳಿಗೆ ಹೋಲಿಸಿದರೆ ಇದು ವೇಗವಾಗಿ ಹರಡಲು ಕಾರಣವಾಗಿರಬಹುದು ಎನ್ನಲಾಗಿದೆ.
ಜಪಾನ್‌ನ ಕ್ಯೋಟೋ ಪ್ರಿಫೆಕ್ಚುರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ಚೀನಾದ ವುಹಾನ್‌ನಲ್ಲಿ ಹುಟ್ಟಿಕೊಂಡ ಸಾರ್ಸ್-ಕೋವಿ-2 ತಳಿ ಮತ್ತು ಅದರ ಎಲ್ಲಾ ರೂಪಾಂತರಗಳ (VOCs) ನಡುವಿನ ವೈರಲ್ ಪರಿಸರ ಸ್ಥಿರತೆಯ ವ್ಯತ್ಯಾಸಗಳನ್ನು ವಿಶ್ಲೇಷಿಸಿದ್ದಾರೆ.
Corona Update: 1705 ಜನರಿಗೆ ಸೋಂಕು, 30 ಮಂದಿ ಸಾವು; ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ
ಬಯೋರಿಕ್ಸ್‌ವಿ ಎಂಬ ನಿಯತಕಾಲಿಕೆಯಲ್ಲಿ ಪೋಸ್ಟ್ ಮಾಡಲಾದ ಅಧ್ಯಯನ ವರದಿ ಪ್ರಕಾರ ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಪ್ಲಾಸ್ಟಿಕ್ ಮತ್ತು ಚರ್ಮದ ಮೇಲ್ಮೈಗಳಲ್ಲಿ ಮೂಲ ಎಳೆಗಿಂತ ಎರಡು ಪಟ್ಟು ಹೆಚ್ಚು ದೀರ್ಘಾವಧಿಯ ಬದುಕುಳಿಯುವಿಕೆಯನ್ನು ಪ್ರದರ್ಶಿಸಿವೆ ಎಂದು ಕಂಡುಬಂದಿದೆ.
“ಈ ವಿಓಸಿಗಳ ಹೆಚ್ಚಿನ ಪರಿಸರ ಸ್ಥಿರತೆಯು ಸಂಪರ್ಕ ಪ್ರಸರಣದ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಹರಡುವಿಕೆಗೆ ಇದು ಪೂರಕವಾಗಿದೆ” ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.
“ವಿಓಸಿಗಳಲ್ಲಿ ಓಮಿಕ್ರಾನ್ ಅತ್ಯಧಿಕವಾದ ಪರಿಸರ ಸ್ಥಿರತೆಯನ್ನು ಹೊಂದಿದೆ ಎಂದು ಈ ಅಧ್ಯಯನವು ತೋರಿಸಿದೆ, ಇದು ಡೆಲ್ಟಾ ರೂಪಾಂತರವನ್ನು ಹಿಂದಿಕ್ಕಿ ವೇಗವಾಗಿ ಹರಡಲು ಮೇಲ್ಕಂಡ ರೂಪಾಂತರವನ್ನು ಅನುಮತಿಸಿದ ಅಂಶಗಳಲ್ಲಿ ಒಂದಾಗಿರಬಹುದು” ಎಂದು ಲೇಖಕರು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ, ಮೂಲ ಸ್ಟ್ರೈನ್ ಮತ್ತು ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಗಳ ಬದುಕುಳಿಯುವ ಸರಾಸರಿ ಅವಧಿಗಳು ಕ್ರಮವಾಗಿ 56 ಗಂಟೆಗಳು, 191.3 ಗಂಟೆಗಳು, 156.6 ಗಂಟೆಗಳು, 59.3 ಗಂಟೆಗಳು ಮತ್ತು 114 ಗಂಟೆಗಳು ಎಂದು ಅಧ್ಯಯನವು ತೋರಿಸುತ್ತದೆ.
ಚರ್ಮದ ಮಾದರಿಗಳಲ್ಲಿ, ಮೂಲ ಆವೃತ್ತಿಗೆ ವೈರಸ್ ಬದುಕುಳಿಯುವ ಸರಾಸರಿ ಅವಧಿಗಳು ಸಮಯಗಳು 8.6 ಗಂಟೆಗಳು, ಆಲ್ಫಾಗೆ 19.6 ಗಂಟೆಗಳು, ಬೀಟಾಗೆ 19.1 ಗಂಟೆಗಳು, ಗಾಮಾಕ್ಕೆ 11 ಗಂಟೆಗಳು, ಡೆಲ್ಟಾಕ್ಕೆ 16.8 ಗಂಟೆಗಳು ಮತ್ತು ಒಮಿಕ್ರಾನ್‌ಗೆ 21.1 ಗಂಟೆಗಳು ಎಂದು ಸಂಶೋಧಕರು ತಿಳಿಸಿದ್ದಾರೆ.
ಆಲ್ಫಾ ಮತ್ತು ಬೀಟಾ ರೂಪಾಂತರಗಳ ನಡುವೆ ಬದುಕುಳಿಯುವ ಸಮಯಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡಿಲ್ಲ, ಮತ್ತು ಅವುಗಳು ಒಂದೇ ರೀತಿಯ ಪರಿಸರ ಸ್ಥಿರತೆಯನ್ನು ಹೊಂದಿದ್ದು, ಇದು ಹಿಂದಿನ ಅಧ್ಯಯನಗಳ ಫಲಿತಾಂಶಗಳೊಂದಿಗೆ ಪೂರಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.