ಕೋವಿಡ್-19ನ ಹೊಸ ಅವತಾರಿ ಒಮಿಕ್ರಾನ್ ಡೆಲ್ಟಾವತಾರಿಗಿಂತಲೂ ವೇಗವಾಗಿ ಹಬ್ಬುತ್ತಿದ್ದು, ಪ್ರತಿ 1.5-3 ದಿನಗಳ ಅವಧಿಯಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ.
ಒಮಿಕ್ರಾನ್ ವೈರಾಣು ಇದುವರೆಗೂ 89 ದೇಶಗಳಲ್ಲಿ ಕಂಡಿರುವುದು ಪತ್ತೆಯಾಗಿದ್ದು, ಸಾಮೂಹಿಕ ಪಸರುವಿಕೆ ಇರುವ ಪ್ರದೇಶಗಳಲ್ಲಿ ಪ್ರತಿ 1.5-3 ದಿನಗಳ ಅವಧಿಯಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಮಹಾರಾಷ್ಟ್ರ: ಡ್ರೋನ್ ಮುಖಾಂತರ ಕೋವಿಡ್ ಲಸಿಕೆ ರವಾನೆಗೆ ಚಾಲನೆ
ವ್ಯಾಪಕವಾಗಿ ಹಬ್ಬಬಲ್ಲ ಕ್ಷಮತೆಯೊಂದಿಗೆ ಮಾನವರ ರೋಗ ನಿರೋಧಕ ಶಕ್ತಿಯನ್ನು ಬೇಧಿಸಿ ಪಸರಬಲ್ಲ ಒಮಿಕ್ರಾನ್ನ ವೈದ್ಯಕೀಯ ತೀವ್ರತೆಯ ಬಗ್ಗೆ ಇನ್ನೂ ಕೇವಲ ಸೀಮಿತ ಮಾಹಿತಿಯಷ್ಟೇ ಇದೆ ಹಾಗೂ ಒಮಿಕ್ರಾನ್ ವಿರುದ್ಧ ಪ್ರಭಾವಶಾಲಿ ಲಸಿಕೆಗಳ ಬಗ್ಗೆಯೂ ಸಾಕ್ಷ್ಯಗಳು ಇನ್ನೂ ಸಿಕ್ಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ಗಳಲ್ಲಿ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಅಲ್ಲಿನ ಆರೋಗ್ಯ ಸೇವೆ ವ್ಯವಸ್ಥೆಗಳು ಶೀಘ್ರದಲ್ಲೇ ಸಾಮರ್ಥ್ಯ ಮೀರಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.