ಒಮಿಕ್ರಾನ್ ರೂಪಾಂತರಿ ಕೋವಿಡ್ ಸೋಂಕು ಈಗ ವ್ಯಾಪಕವಾಗಿ ಹರಡುತ್ತಿದ್ದು, ಲಸಿಕೆ ಪಡೆದ ಹಾಗೂ ಸೋಂಕಿನಿಂದ ಚೇತರಿಸಿಕೊಂಡ ಮಂದಿಯಲ್ಲೂ ಸಹ ಕಂಡು ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ತಿಳಿಸಿದ್ದಾರೆ.
“ಡೆಲ್ಟಾ ರೂಪಾಂತರಿಗಿಂತಲೂ ಒಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದೆ ಎಂಬ ಕುರಿತು ಈಗ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ,” ಎಂದ ಟೆಡ್ರೋಸ್, “ಮತ್ತು ಲಸಿಕೆ ಪಡೆದ ಮತ್ತು ಚೇತರಿಸಿಕೊಂಡ ಮಂದಿಗೂ ಈ ಸೋಂಕು ತಗುಲುವ ಸಾಧ್ಯತೆ ಇದೆ,” ಎಂದಿದ್ದಾರೆ.
ಓಮಿಕ್ರಾನ್ ಭಯ – ಭಾರತ, ದಕ್ಷಿಣ ಆಫ್ರಿಕಾ ಟೆಸ್ಟ್ ವೀಕ್ಷಿಸಲು ಕ್ರೀಡಾಂಗಣದೊಳಗಿಲ್ಲ ಪ್ರೇಕ್ಷಕರಿಗೆ ಅವಕಾಶ
ಸೋಂಕಿನ ವಿರುದ್ಧ ಜಗತ್ತು ಕೆಲವೊಂದು ಕಠಿಣ ನಿರ್ಧಾರಗಳನ್ನು ಮಾಡುವ ಮೂಲಕ, “2022ರ ವರ್ಷ ನಾವೆಲ್ಲಾ ಈ ಸೋಂಕಿಗೆ ಅಂತ್ಯ ಹಾಡಬೇಕು,” ಎಂದಿದ್ದಾರೆ ಟೆಡ್ರೋಸ್.
ಸಾಂಕ್ರಮಿಕಕ್ಕೆ ಅಂತ್ಯ ಹಾಡುವುದು ಸಾಧ್ಯವಿದೆ ಎನ್ನುವ ಟೆಡ್ರೋಸ್, ಇದಕ್ಕೆ ಮಾಸ್ಕ್ ಧಾರಣೆಯಿಂದ, ಲಸಿಕೆಗಳು ಮತ್ತು ಸಾಮಾಜಿಕ ಅಂತರಗಳಂತ ನಮ್ಮ ಬಳಿ ಇರುವ ಎಲ್ಲಾ ’ಉಪಕರಣಗಳ’ ಬಳಕೆ ಮಾಡಬೇಕಾಗುತ್ತದೆ ಎಂದಿದ್ದಾರೆ.
“ಮತ್ತು ಬಹಳ ಮುಖ್ಯವಾಗಿ, ಲಸಿಕೆಗಳ ಲಭ್ಯತೆ ವಿಚಾರದಲ್ಲಿ ಜಗತ್ತು ಮೊದಲು ಅಸಮಾನತೆ ತೊಲಗಿಸಬೇಕು. ಬರುವ ವರ್ಷದಲ್ಲಿ ನಾವು ಸೋಂಕಿನ ವಿರುದ್ಧ ಗೆಲ್ಲಬೇಕಾದಲ್ಲಿ ನಾವು ಅಸಮಾನತೆಗೆ ಕೊನೆ ಹಾಡಬೇಕು,’’ ಎಂದಿದ್ದಾರೆ ಟೆಡ್ರೋಸ್.