ಒಮಿಕ್ರಾನ್ ಸೋಂಕಿನ ಎರಡು ಪ್ರಕರಣಗಳು ಪತ್ತೆಯಾದ ನಂತರ ಕರ್ನಾಟಕ ಸರ್ಕಾರವು ಈ ಸೋಂಕು ವ್ಯಾಪಿಸದಂತೆ ನೋಡಿಕೊಳ್ಳಲು ಕಠಿಣವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾಜ್ಯಾದ್ಯಂತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಇದರ ಬೆನ್ನಿಗೆ, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಮಾಲ್‌ಗಳು, ಸಿನೆಮಾ ಥಿಯೇಟರ್‌ಗಳಂಥ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಕೋವಿಡ್ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ಪಡೆದಿರುವುದು ಕಡ್ಡಾಯವೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಆದೇಶದಲ್ಲಿ ತಿಳಿಸಿದೆ.
ಅಪ್ಪನ ಕೈ ಹಿಡಿದಿರುವ ಮಗನ ಫೋಟೋ ಶೇರ್ ಮಾಡಿಕೊಂಡ ನಟಿ ನುಸ್ರತ್ ಜಹಾನ್
ಆದೇಶಾನುಸಾರ: ಮೇಲ್ಕಂಡ ಜಾಗಗಳ ಮಾಲೀಕರು ಹಾಗೂ ನಿರ್ವಾಹಕರು ತಮ್ಮಲ್ಲಿಗೆ ಬರುವ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಹಾಗೂ ಕೋವಿಡ್ ಹಬ್ಬದಂತೆ ತೆಗೆದುಕೊಳ್ಳಬೇಕಾದ ಇತರೆ ಕ್ರಮಗಳನ್ನು ಖಾತ್ರಿಪಡಿಸಲು ಸೂಚಿಸಲಾಗಿದೆ. ಮೇಲ್ಕಂಡ ಸ್ಥಳಗಳ ಪ್ರಾಂಗಣಕ್ಕೆ ಪ್ರವೇಶಿಸುವ ಮಂದಿಯ ಲಸಿಕಾ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನಂತರವಷ್ಟೇ ಅವರನ್ನು ಒಳಗೆ ಬಿಡಲು ಸೂಚಿಸಲಾಗಿದೆ.
ಇದೇ ವೇಳೆ, ದೇಶಾದ್ಯಂತ ಒಮಿಕ್ರಾನ್ ಸೋಂಕಿನ 21 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ರಾಜಸ್ಥಾನದಲ್ಲಿ 9, ಮಹಾರಾಷ್ಟ್ರದಲ್ಲಿ 8, ಕರ್ನಾಟಕದಲ್ಲಿ 2 ಹಾಗೂ ದೆಹಲಿ ಮತ್ತು ಗುಜರಾತ್‌ನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ.