ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ದಿನ ದಿನಕ್ಕೂ ಹೆಚ್ಚಾಗ್ತಿದೆ. ಒಮಿಕ್ರಾನ್ ಬಗ್ಗೆ ಜನರಿಗೆ ಆತಂಕ ಮನೆ ಮಾಡಿದೆ. ಇದು ವೇಗವಾಗಿ ಹರಡುತ್ತದೆ ಆದ್ರೆ ಹೆಚ್ಚು ಅಪಾಯಕಾರಿಯಲ್ಲವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಒಮಿಕ್ರಾನ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗ್ತಿದೆ. ಈ ಮಧ್ಯೆ ಒಮಿಕ್ರಾನ್ ಲಕ್ಷಣಗಳ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಒಮಿಕ್ರಾನ್ ಲಕ್ಷಣಗಳಲ್ಲಿ ಚರ್ಮದ ದುದ್ದು ಕೂಡ ಒಂದಾಗಿದೆ. ಒಮಿಕ್ರಾನ್ ಮುಖದ ಮೇಲೆ ದದ್ದುಗಳನ್ನು ಮೂಡಿಸುತ್ತಿದೆ. ಇದು ತುರಿಕೆಯನ್ನುಂಟು ಮಾಡ್ತಿದೆ. ಒಮಿಕ್ರಾನ್ ಸೋಂಕಿಗೆ ಒಳಗಾದ ನಂತರ ಚರ್ಮದ ದದ್ದುಗಳ ಸಮಸ್ಯೆ ವಯಸ್ಕರಿಗಿಂತ ಹದಿಹರೆಯದವರಲ್ಲಿ ಹೆಚ್ಚು ಕಂಡು ಬರುತ್ತಿದೆ. ಒಮಿಕ್ರಾನ್ ಸೋಂಕಿಗೆ ಒಳಗಾದ ಹದಿಹರೆಯದವರಲ್ಲಿ ಶೇಕಡಾ 15 ರಷ್ಟು ಜನರು ಚರ್ಮದ ದದ್ದುಗಳನ್ನು ಹೊಂದಿದ್ದಾರೆ ಎಂದು ವೈದ್ಯ ಡೇವಿಡ್ ಲಾಯ್ಡ್ ಹೇಳಿದ್ದಾರೆ. ಇದಲ್ಲದೆ ಆಯಾಸ, ತಲೆನೋವು ಮತ್ತು ಹಸಿವಿನ ಸಮಸ್ಯೆ ಕಾಣಿಸಿಕೊಳ್ತಿದೆ.
ಮೂಗು ಸೋರುವುದು, ಗಂಟಲು ನೋವು, ಸೀನು, ಬೆನ್ನು ನೋವು, ಸ್ನಾಯು ನೋವು ಮತ್ತು ರಾತ್ರಿ ಬೆವರುವುದು ಒಮಿಕ್ರಾನ್ ಲಕ್ಷಣಗಳಾಗಿವೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಇದಕ್ಕೆ ಮುಖ್ಯ ಮದ್ದಾಗಿದೆ. ಅನವಶ್ಯಕವಾಗಿ ಸಾರ್ವಜನಿಕ ಪ್ರದೇಶಗಳಿಗೆ ಹೋಗದಂತೆ ಸಲಹೆ ನೀಡಲಾಗ್ತಿದೆ.