ಪಕ್ಕದ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಪಿಂಪ್ರಿಯ ನಾಲ್ವರು ಹಾಗೂ ಮುಂಬಯಿನ ಮೂವರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ.
ಮುಂಬಯಿನ ಮೂವರು ಸೋಂಕಿತರೆಲ್ಲ ಪುರುಷರಾಗಿದ್ದು, 25, 37 ಹಾಗೂ 48 ವರ್ಷದವರಾಗಿದ್ದಾರೆ. ಇವರೆಲ್ಲ ದಕ್ಷಿಣ ಆಫ್ರಿಕಾ, ತಾಂಜೇನಿಯಾ ಹಾಗೂ ಇಂಗ್ಲೆಂಡ್ ನಿಂದ ಬಂದವರಾಗಿದ್ದಾರೆ. ರೋಗಿಗಳಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ದೇಶದಲ್ಲಿ ಸದ್ಯ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ 9, ಗುಜರಾತ್ ನಲ್ಲಿ 3 ಹಾಗೂ ಕರ್ನಾಟಕ ಹಾಗೂ ದೆಹಲಿಯಲ್ಲಿ ತಲಾ ಇಬ್ಬರು ಸೋಂಕಿತರಾಗಿದ್ದಾರೆ.