
ಪ್ರಪಂಚದ ಹಲವು ದೇಶಗಳಲ್ಲಿ ಈ ಹೊಸ ರೂಪಾತರಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದು ಸೋಂಕಿನ ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ. ಕೊರೋನಾ ವೈರಸ್ ಮಕ್ಕಳಿಗೆ ಅಷ್ಟಾಗಿ ಬಾಧಿಸಿರಲಿಲ್ಲ. ಆದರೆ ಈ ಹೊಸ ರೂಪಾಂತರಿ ಓಮಿಕ್ರಾನ್ ರೋಗವು ವಯಸ್ಕರಿಗೆ ಮಾತ್ರವಲ್ಲದೆ ಮಕ್ಕಳಿಗೂ ಕೂಡ ಬಹುಬೇಗವಾಗಿ ಹಬ್ಬುತ್ತಿದೆ. ಇದರಿಂದ ಪೋಷಕರಲ್ಲಿ ಆತಂಕ ಮಡುಗಟ್ಟಿದೆ.
ನಿಮ್ಮ ಮಕ್ಕಳನ್ನು ಸಾಧ್ಯವಾದಷ್ಟು ಮನೆಯೊಳಗೆ ಇರಿಸುವುದು ಒಳ್ಳೆಯದು. ಸೋಂಕು ತಡೆಯಲು ನೀವು ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು. ಓಮಿಕ್ರಾನ್ ರೋಗವು ಚಿಕ್ಕ ಮಕ್ಕಳಲ್ಲಿ ವಿಭಿನ್ನವಾದ ಲಕ್ಷಣಗಳು ಕಾಣಿಸಬಹುದು. ಇತ್ತೀಚಿನ ವರದಿಯಲ್ಲಿ ಓಮಿಕ್ರಾನ್ ರೂಪಾಂತರವು ಮಕ್ಕಳಲ್ಲಿ ಕ್ರೂಪ್ ಎಂದು ಕರೆಯಲ್ಪಡುವ ತೀವ್ರವಾದ ಕೆಮ್ಮನ್ನು ಉಂಟುಮಾಡಬಹುದು ಎಂದು ಹೇಳಿದೆ.
ವೈದ್ಯರ ಪ್ರಕಾರ, ಕ್ರೂಪ್ ಅಷ್ಟೇನೂ ಆತಂಕಕಾರಿಯಾಗಿಲ್ಲ. ರೋಗ ಪತ್ತೆಹಚ್ಚಲು ಇದರಿಂದ ಬಹಳ ಸುಲಭವಾಗಿದೆ. ಆದರೆ, ಈ ಕೆಮ್ಮು ಇದೇ ಮೊದಲ ಬಾರಿ ಭಾದಿಸುವುದ್ರಿಂದ ಪೋಷಕರಿಗೆ ಕೊಂಚ ಆತಂಕವನ್ನುಂಟು ಮಾಡಬಹುದು. ಇದು ನಾಯಿ ಅಥವಾ ಸೀಲ್ನಂತೆ ಬೊಗಳುವ ರೀತಿಯಾಗಿ ಜೋರಾದ ಕೆಮ್ಮು ಬರುತ್ತದೆ. ಇದರಿಂದ ಮಕ್ಕಳಲ್ಲಿ ಮೇಲ್ಭಾಗದ ಶ್ವಾಸನಾಳದ ಸೋಂಕಿನಿಂದ ಧ್ವನಿಪೆಟ್ಟಿಗೆಯ ಮತ್ತು ಶ್ವಾಸನಾಳದ ಉರಿಯೂತ ಉಂಟಾಗುತ್ತದೆ.
ಮಕ್ಕಳಲ್ಲಿ ಓಮಿಕ್ರಾನ್ನ ಇತರ ಲಕ್ಷಣಗಳು:
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈವರೆಗೆ ಲಸಿಕೆ ಹಾಕಿಲ್ಲವಾದ್ದರಿಂದ ಸೋಂಕು ತಗಲುವ ಅಪಾಯ ಜಾಸ್ತಿಯೇ ಇದೆ. ಮಕ್ಕಳಲ್ಲಿ ಕಂಡುಬರುವ ರೋಗಲಕ್ಷಣಗಳ ಬಗ್ಗೆ ಪೋಷಕರು ಗಮನ ಹರಿಸುವುದು ಅತಿಮುಖ್ಯ. ಜ್ವರ, ಗಂಟಲು ನೋವು, ಕೆಮ್ಮು, ನೆಗಡಿ, ದೇಹದ ನೋವು ಮಕ್ಕಳಲ್ಲಿ ಕಂಡುಬರುವ ಓಮಿಕ್ರಾನ್ನ ಸಾಮಾನ್ಯ ಲಕ್ಷಣಗಳಾಗಿವೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮಕ್ಕಳನ್ನು ಸುರಕ್ಷಿತವಾಗಿರಿಸಲು ಉತ್ತಮ ಮಾರ್ಗವಾಗಿದೆ. ವಯಸ್ಕರು ಜಾಗರೂಕರಾಗಿರಬೇಕು ಮತ್ತು ಹೊರಗೆ ಹೋದಾಗ ಮಾಸ್ಕ್ ಧರಿಸಬೇಕು, ಆಗಾಗ್ಗೆ ಕೈಗಳನ್ನು ತೊಳೆಯುತ್ತಿರಬೇಕು. ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಉತ್ತಮ.