ಬೆಂಗಳೂರು ಮೂಲದ ಐಟಿ ದಿಗ್ಗಜ ವಿಪ್ರೋ ಒಮಿಕ್ರಾನ್ ಕಾಟದಿಂದಾಗಿ ಜಾಗತಿಕ ಮಟ್ಟದಲ್ಲಿ ತನ್ನ ಕಚೇರಿಗಳನ್ನು ನಾಲ್ಕು ವಾರಗಳ ಮಟ್ಟಿಗೆ ಮುಚ್ಚಲು ನಿರ್ಧರಿಸಿದೆ.
ಜಗದಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಜನವರಿ 12ರಿಂದ ವಿಪ್ರೋ ಈ ನಿರ್ಧಾರಕ್ಕೆ ಬಂದಿದ್ದು, ತನ್ನ ಸಿಬ್ಬಂದಿ ವರ್ಗಕ್ಕೆ ಕಚೇರಿಗೆ ಮರಳುವ ಅಭಿಯಾನವನ್ನು ಸದ್ಯಕ್ಕೆ ಮುಂದೂಡಿರುವುದಾಗಿ ಕಂಪನಿಯ ಸಿಇಓ ಥಿಯೆರ‍್ರಿ ಡೆಲಪೋರ್ಟೆ ತಿಳಿಸಿದ್ದಾರೆ.
ಆರೋಗ್ಯಕರ ಜೀವನ ಶೈಲಿಗೆ ಇಲ್ಲಿವೆ ಟಿಪ್ಸ್
ಡಿಸೆಂಬರ್‌ನಲ್ಲಿ ಅಂತ್ಯಗೊಂಡ ಕಳೆದ ತ್ರೈಮಾಸಿಕದಲ್ಲಿ ವಿಪ್ರೋ 2,970 ಕೋಟಿ ರೂ.ಗಳ ಲಾಭ ಕಂಡಿದ್ದು, ಇದು 22ರ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಡ 2,931 ಕೋಟಿ ರೂ.ಗಳ ಲಾಭಕ್ಕಿಂತ ಹೆಚ್ಚಿದೆ.
ವಿತ್ತೀಯ ವರ್ಷ 22ರ ಮೂರನೇ ತ್ರೈಮಾಸಿಕದ ಒಟ್ಟಾರೆ ಆದಾಯ 20,432.3 ಕೋಟಿ ರೂ.ಗಳಷ್ಟಿದೆ. ಇದು ಎರಡನೇ ತ್ರೈಮಾಸಿಕದ ಆದಾಯವಾದ 19,667 ಕೋಟಿಗಿಂತ ಹೆಚ್ಚಿದೆ.
ಕಳೆದ ಸೆಪ್ಟೆಂಬರ್‌ನಿಂದ ಕಂಪನಿಯ ಹಿರಿಯ ಅಧಿಕಾರಿಗಳು ಕಚೇರಿಗೆ ವಾರಕ್ಕೆ ಮೂರು ದಿನದಂತೆ ನಿಧಾನವಾಗಿ ಮರಳಲು ಆರಂಭಿಸಿದ್ದರು. ಸಿಬ್ಬಂದಿ ವರ್ಗದ 3%ನಷ್ಟು ಮಂದಿ ಕಚೇರಿಯಿಂದ ಕೆಲಸ ಮಾಡುತ್ತಿದ್ದಾರೆ.
18 ತಿಂಗಳ ಕಾಲ ಮನೆಗಳಿಂದಲೇ ಕೆಲಸ ಮಾಡುತ್ತಾ ಬಂದಿರುವ ನೌಕರರನ್ನು ಮರಳಿ ಕಚೇರಿಗೆ ಕರೆಯಿಸಲು ಐಟಿ ಕಂಪನಿಗಳು ಉತ್ಸುಕವಾಗಿದ್ದು, ಕೋವಿಡ್ ಲಸಿಕಾಕರಣ ಭರದಿಂದ ಸಾಗುತ್ತಿರುವುದು ಇದಕ್ಕೆ ಪೂರಕವಾಗಿದೆ.
ತನ್ನ ಸಿಬ್ಬಂದಿ ಬಲದ 80% ಮಂದಿಯನ್ನು ಮರಳಿ ಕಚೇರಿಗೆ ಕರೆಯಿಸಲು ಯತ್ನಿಸುತ್ತಿರುವುದಾಗಿ ಟಿಸಿಎಸ್ ತಿಳಿಸಿದ್ದು, 2021ರ ನವೆಂಬರ್‌ನಿಂದ ಪೂರ್ಣವಾಗಿ ಲಸಿಕೆ ಪಡೆದ ಸಿಬ್ಬಂದಿಯನ್ನು ಕಚೇರಿಗೆ ಬರುವಂತೆ ಪ್ರೋತ್ಸಾಹಿಸುತ್ತಿತ್ತು.