ಒಮಿಕ್ರಾನ್ ಅವತಾರಿ ಕೋವಿಡ್ ಅಷ್ಟೇನೂ ಅಪಾಯಕಾರಿಯಲ್ಲ ಎಂದು ಪ್ರಾಥಮಿಕ ಸಾಕ್ಷ್ಯಗಳು ತೋರಿರುವ ಕಾರಣ ಹಾಗೂ ಲಸಿಕಾಕರಣ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ಮೇಲೆ ಈ ಸೋಂಕು ದೊಡ್ಡ ಹೊಡೆತ ನೀಡುವ ಸಾಧ್ಯತೆ ಇಲ್ಲ ಎಂದು ವಿತ್ತ ಸಚಿವಾಲಯದ ಮಾಸಿಕ ಆರ್ಥಿಕ ವರದಿ, ನವೆಂಬರ್ 2021ರಲ್ಲಿ ತಿಳಿಸಲಾಗಿದೆ.
“ಮಾರುಕಟ್ಟೆಯ ವಾತಾವರಣ, ಲಸಿಕಾಕರಣದ ವೇಗ, ಬಲವಾದ ಬಾಹ್ಯ ಬೇಡಿಕೆ ಹಾಗೂ ಸರ್ಕಾರ ಮತ್ತು ಆರ್.ಬಿ.ಐ.ನಿಂದ ನಿರಂತರವಾದ ನೆರವಿನೊಂದಿಗೆ, ವಿತ್ತೀಯ ವರ್ಷದ ಮಿಕ್ಕ ತ್ರೈಮಾಸಿಕಗಳಲ್ಲಿ ಭಾರತದ ಆರ್ಥಿಕತೆಗೆ ಇನ್ನಷ್ಟು ಚೈತನ್ಯ ಬರುವ ನಿರೀಕ್ಷೆ ಇದೆ. ಆದರೂ ಸಹ ಕೋವಿಡ್-19 ಹೊಸ ಅವತಾರಿ ಒಮಿಕ್ರಾನ್ ಸುಸ್ಥಿರ ಚೇತರಿಕೆಗೆ ಸವಾಲಾಗಿದ್ದು, ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ,” ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಾಲೆ: ವರ್ಗಾವಣೆಯಾದ ಶಿಕ್ಷಕನಿಗೆ ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು, ಸಹೋದ್ಯೋಗಿಗಳು
ಈ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯು 8.4%ದರದಲ್ಲಿ ವೃದ್ಧಿಸಿದೆ (ವರ್ಷದಿಂದ ವರ್ಷಕ್ಕೆ) ಎಂದು ವರದಿಯಿಂದ ತಿಳಿದುಬಂದಿದೆ. ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿ ದರವು 20.1 ಪ್ರತಿಶತದಷ್ಟಿತ್ತು.
ಕೋವಿಡ್ ಉಪಟಳದ ನಡುವೆಯೂ ಸತತ ನಾಲ್ಕು ತ್ರೈಮಾಸಿಕಗಳಲ್ಲಿ ಸಕಾರಾತ್ಮಕ ಬೆಳವಣಿಗೆ ತೋರುತ್ತಿರುವ ಕೆಲವೇ ಆರ್ಥಿಕ ಶಕ್ತಿಗಳಲ್ಲಿ ಭಾರತವೂ ಒಂದಾಗಿದೆ.