alex Certify coronavirus:ಯೂರೋಪ್ ನಲ್ಲಿ ಹೆಚ್ಚಾದ ಒಮಿಕ್ರಾನ್ ಭೀತಿ, ಅಮೇರಿಕಾವನ್ನೆ ಗೊಂದಲಕ್ಕೆ ತಳ್ಳಿದ ಹೊಸ ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

coronavirus:ಯೂರೋಪ್ ನಲ್ಲಿ ಹೆಚ್ಚಾದ ಒಮಿಕ್ರಾನ್ ಭೀತಿ, ಅಮೇರಿಕಾವನ್ನೆ ಗೊಂದಲಕ್ಕೆ ತಳ್ಳಿದ ಹೊಸ ವೈರಸ್

ವೈರಸ್ ಹರಡುವುದನ್ನು ತಡೆಯಲು ಸರ್ಕಾರಗಳು ಹೊಸ ನಿರ್ಬಂಧಗಳು ಮತ್ತು ಕ್ರಮಗಳನ್ನು ವಿಧಿಸುತ್ತಿದ್ದರೂ ಸಹ ಒಮಿಕ್ರಾನ್ ಪ್ರಪಂಚದಾದ್ಯಂತ ಹೆಚ್ಚುತ್ತಲೇ ಇದೆ. 2022 ಅನ್ನು ಸ್ವಾಗತಿಸಲು ಜಗತ್ತು ಸಿದ್ಧವಾಗುತ್ತಿರುವಾಗಲೆ ಕಂಟ್ರೋಲ್ ಮೀರಿ‌ ಬೆಳೆಯುತ್ತಿರುವ ಒಮಿಕ್ರಾನ್ ಜನರನ್ನ ಮತ್ತೆ ಹಳೆ ದಿನಗಳತ್ತ ತಳ್ಳುತ್ತಿದೆ‌. ಅದ್ರಲ್ಲು ಯುರೋಪ್ ಖಂಡದ ಮೇಲೆ ಹೊಸ ರೂಪಾಂತರಿಯ ಹಿಡಿತ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ‌.

ಒಂದೇ ದಿನ 1,79,807 ಪ್ರಕರಣಗಳು ವರದಿಯಾಗಿದ್ದು, ಒಮಿಕ್ರಾನ್ ತಡೆಗಟ್ಟಲು ಇಡೀ ಯುರೋಪ್ ಹೆಣಗಾಡುತ್ತಿದೆ‌. ಫ್ರಾನ್ಸ್, ಇಟಲಿ, ಗ್ರೀಸ್, ಪೋರ್ಚುಗಲ್ ಮತ್ತು ಇಂಗ್ಲೆಂಡ್‌ನೊಂದಿಗೆ ದಾಖಲೆ ಸಂಖ್ಯೆಯ ದೈನಂದಿನ ಪ್ರಕರಣಗಳು ವರದಿಯಾಗಿವೆ. ಫ್ರಾನ್ಸ್ ನಲ್ಲಿ ಅತಿ ಹೆಚ್ಚು ಕೇಸ್ ಗಳು ವರದಿಯಾಗುತ್ತಿವೆ‌.

ಕ್ರಿಸ್‌ಮಸ್‌ ಹಬ್ಬವಿದ್ದ ಕಾರಣ ವಿಳಂಬವಾಗಿ ಒಂದೇ ದಿನ ಹೆಚ್ಚೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂದು ಊಹಿಸಬಹುದಾದರೂ, ಅಂಕಿ ಅಂಶಗಳ ಗಾತ್ರ ಚಿಕ್ಕದಲ್ಲ. ಫ್ರೆಂಚ್ ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಜನವರಿಯ ಆರಂಭದ ವೇಳೆಗೆ ಫ್ರಾನ್ಸ್ ನಲ್ಲಿ ದಿನಕ್ಕೆ 2,50,000 ಪ್ರಕರಣಗಳು ವರದಿಯಾಗಬಹುದು ಎಂದು ಎಚ್ಚರಿಸಿದ್ದಾರೆ. ಯುಕೆಯ ಪ್ರಧಾನಿ, ದೈನಂದಿನ ಕೋವಿಡ್ ಸೋಂಕುಗಳು ದಾಖಲೆಯ ತುದಿಯನ್ನ ತಲುಪಿವೆ, ಈ ಬಗ್ಗೆ ಹೊಸ ನಿರ್ಬಂಧಗಳನ್ನು ತರುವುದಿಲ್ಲ ಎಂದು ಹೇಳಿಕೆ ಕೊಟ್ಟು ಒಂದು ದಿನದ ನಂತರ 129,471 ಹೊಸ ಪ್ರಕರಣಗಳು ವರದಿಯಾಗಿವೆ‌.

ತಾಲಿಬಾನ್ ವಿರುದ್ಧ ಬೀದಿಗಿಳಿದ ಅಫ್ಘಾನ್ ಮಹಿಳೆಯರು..!

ಅಮೇರಿಕಾದಲ್ಲಿ ಗೊಂದಲ..!

ಅಮೇರಿಕಾದಲ್ಲಿ ಕ್ವಾರಂಟೈನ್ ಮತ್ತು ಮಾರ್ಗಸೂಚಿಗಳಲ್ಲಿ ಹಲವು ಬದಲಾವಣೆಗಳನ್ನ ತರಲಾಗಿದೆ. ಕ್ವಾರಂಟೈನ್ ಅವಧಿಯನ್ನ ಐದು ದಿನಕ್ಕೆ ಕಡಿತಗೊಳಿಸಿರುವುದರ ಬಗ್ಗೆ ಹಲವು ತಜ್ಞರು ಸರ್ಕಾರವನ್ನ ತೀಕ್ಷ್ಣ ವಾಗಿ ಟೀಕಿಸಿದ್ದಾರೆ. ಒಮಿಕ್ರಾನ್ ವೈರಸ್ ತಡೆಗಟ್ಟಲು ತಂದ ಮಾರ್ಗದರ್ಶನದಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದು ಸಹ ಅಮೇರಿಕನ್ನರಲ್ಲಿ ಭಯದ ಜೊತೆ ಗೊಂದಲ ಉಂಟುಮಾಡಿದೆ. ಗುಣಲಕ್ಷಣ ರಹಿತ ಕೊರೋನಾ ಸೋಂಕಿತರ ಕ್ವಾರಂಟೈನ್ ಅವಧಿಯನ್ನ ಐದು ದಿನಕ್ಕೆ ಇಳಿಸಿರುವುದಕ್ಕೆ ತಜ್ಞರು ಹಾಗೂ ಜನಸಾಮಾನ್ಯರು ಒಂದು ವೇಳೆ ಇದು ಸಾಮಾನ್ಯ ಸೋಂಕು ಆಗಿರದೆ ಒಮಿಕ್ರಾನ್ ಆದರೆ ಗತಿ‌ ಏನು ಎಂದು ಪ್ರಶ್ನಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...