ಭಾರತದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೋವಿಡ್-19 ಸೋಂಕುಗಳ ಸಂಖ್ಯೆಯ ಸರಾಸರಿ ಸದ್ಯದ ಮಟ್ಟಿಗೆ 7,500 ರಲ್ಲಿದ್ದು, ಒಮಿಕ್ರಾನ್ ಅವತಾರಿಯು ಡೆಲ್ಟಾವತಾರಿಯನ್ನು ಹಿಂದಿಕ್ಕುತ್ತಿರುವಂತೆಯೇ ಈ ಸಂಖ್ಯೆಗಳು ಇನ್ನಷ್ಟು ಏರಲಿವೆ ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್‌ಮಾಡೆಲ್ ಸಮಿತಿಯ ಸದಸ್ಯರು ತಿಳಿಸಿದ್ದು, ದೇಶದಲ್ಲಿ ಸೋಂಕಿನ ಮೂರನೇ ಅಲೆಯನ್ನು ಅಂದಾಜಿಸಿದ್ದಾರೆ.
ಭಾರತವು ಒಮಿಕ್ರಾನ್ ಅವತಾರಿಯಿಂದ ಮೂರನೇ ಅಲೆ ಎದುರಿಸಲಿದ್ದು, ಅದು ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ ವಿದ್ಯಾಸಾಗರ್ ತಿಳಿಸಿದ್ದಾರೆ.
ಮಹಾರಾಷ್ಟ್ರ: ಡ್ರೋನ್ ಮುಖಾಂತರ ಕೋವಿಡ್ ಲಸಿಕೆ ರವಾನೆಗೆ ಚಾಲನೆ
“ಮುಂದಿನ ವರ್ಷದಲ್ಲಿ ಮೂರನೇ ಅಲೆಯು ಭಾರತದಲ್ಲಿ ಆಗಮಿಸುವ ಸಾಧ್ಯತೆ ಇದೆ. ದೇಶದಲ್ಲಿ ದೊಡ್ಡ ಮಟ್ಟದಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿರುವ ಕಾರಣ ಇದು ಎರಡನೇ ಅಲೆಗಿಂತ ಲಘುವಾಗಿರಲಿದೆ. ಖಂಡಿತವಾಗಿಯೂ ಮೂರನೇ ಅಲೆ ಇರಲಿದೆ. ಸದ್ಯದ ಮಟ್ಟಿಗೆ ನಮ್ಮಲ್ಲಿ ಪ್ರತಿನಿತ್ಯ ಸುಮಾರು 7,500 ಪ್ರಕರಣಗಳು ದಾಖಲಾಗುತ್ತಿದ್ದು, ಒಮಿಕ್ರಾನ್ ಅವತಾರಿ ಡೆಲ್ಟಾವತಾರಿಯನ್ನು ಹಿಂದಿಕ್ಕುತ್ತಲೇ ಖಂಡಿತವಾಗಿಯೂ ಈ ಸಂಖ್ಯೆಗಳು ಮೇಲೇರಲಿವೆ,” ಎಂದಿದ್ದಾರೆ ವಿದ್ಯಾಸಾಗರ್.
ಐಐಟಿ ಹೈದರಾಬಾದ್‌ನಲ್ಲಿ ಪ್ರೊಫೆಸರ್ ಆಗಿರುವ ವಿದ್ಯಾಸಾಗರ್, ಎರಡನೇ ಅಲೆಯಷ್ಟು ಪ್ರಮಾಣದಲ್ಲಿ ಪ್ರತಿನಿತ್ಯದ ಕೇಸುಗಳನ್ನು ಮೂರನೇ ಅಲೆಯ ಸಂದರ್ಭದಲ್ಲಿ ಕಾಣುವ ಸಾಧ್ಯತೆ ಇಲ್ಲವೆಂದಿದ್ದಾರೆ.