alex Certify ಮತ್ತೆ ಭಯಕ್ಕೆ ಕಾರಣವಾಗಿದೆ ಕೊರೊನಾ ರೂಪಾಂತರ: ಓಮಿಕ್ರಾನ್ ಸೋಂಕಿನ ರೋಗ ಲಕ್ಷಣವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಭಯಕ್ಕೆ ಕಾರಣವಾಗಿದೆ ಕೊರೊನಾ ರೂಪಾಂತರ: ಓಮಿಕ್ರಾನ್ ಸೋಂಕಿನ ರೋಗ ಲಕ್ಷಣವೇನು ಗೊತ್ತಾ….?

ಕೊರೊನಾ ವೈರಸ್ ಜಗತ್ತಿನ ಚಿತ್ರಣವನ್ನು ಬದಲಿಸಿದೆ. ಹೊಸ ಹೊಸ ರೂಪಾಂತರಗಳು ಆತಂಕಕ್ಕೆ ಕಾರಣವಾಗ್ತಿದೆ. ಡೆಲ್ಟಾ ವೈರಸ್ ಮೂಲಕ ಕೊರೊನಾ ಎರಡನೇ ಅಲೆ ಸಾಕಷ್ಟು ವಿನಾಶಕ್ಕೆ ಕಾರಣವಾಗಿತ್ತು, ಈಗ ಓಮಿಕ್ರಾನ್ ಮತ್ತೊಂದು ಅನಾಹುತಕ್ಕೆ ಮುನ್ನುಡಿ ಬರೆಯುತ್ತಿದೆ. ಓಮಿಕ್ರಾನ್ ರೂಪಾಂತರದ ಮೊದಲ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿದೆ. ಹಾಂಕಾಂಗ್ ಮತ್ತು ಬೆಲ್ಜಿಯಂನಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಂಸ್ಥೆ ಇದ್ರ ಬಗ್ಗೆ ಎಚ್ಚರಿಕೆ ನೀಡಿದೆ.

ಈ ರೂಪಾಂತರವು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಈಗಾಗಲೇ ಚೇತರಿಸಿಕೊಂಡಿರುವ ಕೊರೊನಾ ರೋಗಿಗಳಲ್ಲಿ ಮರುಸೋಂಕಿನ ಹೆಚ್ಚಿನ ಅವಕಾಶವವಿದೆ. ಇದು ಇತರ ತಿಳಿದಿರುವ ರೂಪಾಂತರಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ತಜ್ಞರು ಹೇಳಿದ್ದರು.

ಹೊಸ ರೂಪಾಂತರ ಪರಿಣಾಮಗಳು ಮತ್ತು ಅಪಾಯದ ಬಗ್ಗೆ ಅಧ್ಯಯನ ನಡೆಯುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಹಾಗೂ ಕೈಗಳನ್ನು ಆಗಾಗ ಸ್ವಚ್ಛಗೊಳಿಸುವುದು ಈ ಸೋಂಕಿನಿಂದ ದೂರವಿರಲು ನೆರವಾಗಲಿದೆ. ಹಾಗೆ ಕೊರೊನಾ ಬೂಸ್ಟರ್ ಡೋಸನ್ನು ಹಿರಿಯರಿಗೆ ನೀಡಬೇಕೆಂಬ ಸಲಹೆ ಕೂಡ ನೀಡಲಾಗ್ತಿದೆ.

ಓಮಿಕ್ರಾನ್ ರೋಗಲಕ್ಷಣಗಳು ಇತರ ರೂಪಾಂತರಗಳಂತೆ ಕೆಮ್ಮು, ಶೀತ, ಜ್ವರ, ಗಂಟಲು ನೋವು, ತಲೆನೋವು, ರುಚಿ ಮತ್ತು ವಾಸನೆಯ ನಷ್ಟ ಕಾಣಿಸುತ್ತದೆ. ಆದ್ರೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮೂಲಕ ಮಾತ್ರ ಈ ರೂಪಾಂತರವನ್ನು ಕಂಡುಹಿಡಿಯುವ ಏಕೈಕ ಮಾರ್ಗವಾಗಿದೆ. ರೋಗ ಲಕ್ಷಣ ಒಂದೇ ಆಗಿರುತ್ತದೆ. ಆದ್ರೆ ರೋಗದ ತೀವ್ರತೆ, ಹರಡುವಿಕೆ ಭಿನ್ನವಾಗಿರುತ್ತದೆ.

ಅಧಿಕ ದೇಹದ ಉಷ್ಣತೆ, ನಿರಂತರ ಕೆಮ್ಮು ಮತ್ತು ವಾಸನೆ ಅಥವಾ ರುಚಿಯ ನಷ್ಟ ಈ  ರೂಪಾಂತರದಲ್ಲಿ ಹೆಚ್ಚು ಪ್ರಬಲವಾಗಬಹುದು.

ಈ ರೂಪಾಂತರದ ಸಾಮಾನ್ಯ ರೋಗಲಕ್ಷಣ

ಸುಸ್ತು

ಗಂಟಲು ನೋವು

ತಲೆನೋವು

ಮೈಕೈ ನೋವು

ಅತಿಸಾರ

ಚರ್ಮದ ಮೇಲೆ ದದ್ದು

ಕೆಂಪಾಗುವ ಕಣ್ಣುಗಳು

ತೀವ್ರ ರೋಗದ ಲಕ್ಷಣ :

ಉಸಿರಾಟದ ತೊಂದರೆ

ನಡೆದಾಡಲು ಸಮಸ್ಯೆ, ಗೊಂದಲ

ಎದೆ ನೋವು

ಇದು, ರೂಪಾಂತರವು ಹೆಚ್ಚು ಅಪಾಯಕಾರಿ ರೂಪಾಂತರವಾಗಿ ಕಂಡುಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಲಸಿಕೆ ಹಾಕಿದವರ ಮೇಲೆ ಈ ರೂಪಾಂತರ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší