alex Certify ಬ್ರಿಟನ್: ಒಂದೇ ದಿನದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆಯಲ್ಲಿ ಶೇ.50 ರಷ್ಟು ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್: ಒಂದೇ ದಿನದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆಯಲ್ಲಿ ಶೇ.50 ರಷ್ಟು ಏರಿಕೆ

ಒಮಿಕ್ರಾನ್ ಕೋವಿಡ್‌ ಬಗ್ಗೆ ಎಲ್ಲೆಡೆ ಆತಂಕ ಸೃಷ್ಟಿಯಾಗಿರುವ ನಡುವೆ ಬ್ರಿಟನ್‌ನಲ್ಲಿ ಒಂದೇ ದಿನ ಈ ಸೋಂಕಿಗೆ ಒಳಗಾದವರ ಪಟ್ಟಿಗೆ ಹೊಸದಾಗಿ 86 ಮಂದಿ ಸೇರಿಕೊಂಡಿದ್ದಾರೆ. ಈ ಮೂಲಕ ಬ್ರಿಟನ್‌ನಲ್ಲಿ ಒಮಿಕ್ರಾನ್ ಪೀಡಿತರ ಒಟ್ಟಾರೆ ಸಂಖ್ಯೆ 246 ಕ್ಕೆ ಏರಿದೆ.

ಭಾನುವಾರದ ಆರಂಭದ ವೇಳೆ 160 ರಷ್ಟಿದ್ದ ಒಮಿಕ್ರಾನ್ ಪೀಡಿತರ ಸಂಖ್ಯೆ, ದಿನದ ಅಂತ್ಯದ ವೇಳೆಗೆ 246 ತಲುಪಿದ್ದು, ಒಂದೇ ದಿನದಲ್ಲಿ 50%ಗಿಂತ ಹೆಚ್ಚಿನ ಏರಿಕೆಯನ್ನು ದಾಖಲಿಸಿದೆ ಎಂದು ಬ್ರಿಟನ್‌ನ ಆರೋಗ್ಯ ಭದ್ರತಾ ಸಂಸ್ಥೆ ತಿಳಿಸಿದೆ.

BIG NEWS: ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ…; ಸಚಿವ ಸುಧಾಕರ್ ಸ್ಪಷ್ಟನೆ

ಇದೇ ವೇಳೆ, ಬ್ರಿಟನ್‌ನಲ್ಲಿ ಕೋವಿಡ್-19 ಸೋಂಕಿಗೆ ತುತ್ತಾದ ಮಂದಿಯ ಸಂಖ್ಯೆ 10,04,64,389 ಕ್ಕೆ ಏರಿದೆ. ಭಾನುವಾರ ಒಂದೇ ದಿನದಲ್ಲಿ 43,992 ಮಂದಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದೆ. ಇದೇ ದಿನ 54 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ಬ್ರಿಟನ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಸದ್ಯಕ್ಕೆ 1,45,605ರಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...