alex Certify ಮನೆಯಲ್ಲಿಯೇ ಓಮಿಕ್ರೋನ್ ಚಿಕಿತ್ಸೆ ಪಡೆಯುತ್ತಿರುವವರು ವಹಿಸಿ ಈ ಎಚ್ಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿಯೇ ಓಮಿಕ್ರೋನ್ ಚಿಕಿತ್ಸೆ ಪಡೆಯುತ್ತಿರುವವರು ವಹಿಸಿ ಈ ಎಚ್ಚರ

ಕೊರೊನಾ ವೈರಸ್‌ನ ಮೂರನೇ ಅಲೆ ಓಮಿಕ್ರೋನ್ ಜಗತ್ತಿನಲ್ಲಿ ವೇಗವಾಗಿ ಹರಡುತ್ತಿದೆ. ಪ್ರತಿದಿನ ಸಾವಿರಾರು ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಪ್ರಪಂಚದಾದ್ಯಂತ ಹರಡಿರುವ ಎಲ್ಲಾ ಸೋಕುಗಳಲ್ಲಿ ಓಮಿಕ್ರೋನ್ ಅತ್ಯಂತ ಸಾಂಕ್ರಾಮಿಕ ಎಂದು ಹೇಳಲಾಗುತ್ತಿದೆ. ಇದ್ರಿಂದ ರಕ್ಷಣೆ ಪಡೆಯಲು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೆಯೇ ಐಸೋಲೇಶನ್ ನಲ್ಲಿರುವವರ ಆರೈಕೆ ಕೂಡ ಮಹತ್ವ ಪಡೆಯುತ್ತದೆ.

ಓಮಿಕ್ರೋನ್ ಸೋಂಕಿಗೆ ಒಳಗಾದ ಕುಟುಂಬದ ಸದಸ್ಯರನ್ನು ಹೋಮ್ ಐಸೋಲೇಶನ್‌ ಮಾಡಿದಾಗ ಅವರನ್ನು ಸರಿಯಾಗಿ ನೋಡಿಕೊಳ್ಳುವುದು ಇಡೀ ಕುಟುಂಬದ ಜವಾಬ್ದಾರಿ. ರೋಗಿಗಳು ಕೂಡ ಅಷ್ಟೇ ಎಚ್ಚರ ವಹಿಸಬೇಕಾಗುತ್ತದೆ.

ಜನರಲ್ಲಿ ಓಮಿಕ್ರೋನ್ ಬಗ್ಗೆ ಹೆಚ್ಚುತ್ತಿರುವ ಗೊಂದಲ ಹೋಗಲಾಡಿಸಲು  ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರಲ್ಲಿ ಹೋಮ್ ಐಸೋಲೇಶನ್ ನಲ್ಲಿರುವವರು ಯಾವೆಲ್ಲ ಕ್ರಮಕೈಗೊಳ್ಳಬೇಕು ಎಂಬುದನ್ನು ಹೇಳಲಾಗಿದೆ.

60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೇರೆ ಯಾವುದೇ ಕಾಯಿಲೆಗಳಿಲ್ಲದೆ ಓಮಿಕ್ರೋನ್ ನ ರೋಗಲಕ್ಷಣ  ಕಂಡುಬಂದರೆ  ಅವರು ಮನೆಯಲ್ಲಿ ಇದ್ದು ಚಿಕಿತ್ಸೆ ಪಡೆಯಬೇಕು. ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕೆ ಅಥವಾ ಹೋಮ್ ಕ್ವಾರಂಟೈನ್ ಮಾಡಬೇಕೆ ಎಂಬ ಬಗ್ಗೆ ವೈದ್ಯರ ಸಲಹೆ ಪಡೆಯಬೇಕು.

ಯಾವುದೇ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು. ರೋಗಲಕ್ಷಣ ಇರುವವರು ಸಾಕಷ್ಟು ಗಾಳಿ ಬೆಳಕು ಇರುವ ಬೇರೆ ರೂಮಿನಲ್ಲಿ ಒಬ್ಬರೆ ಇರುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮಾಸ್ಕನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಪ್ರತಿದಿನ, ನಾಲ್ಕೈದು ಬಾರಿ ಆಮ್ಲಜನಕದ ಮಟ್ಟ, ಹೃದಯದ ಬಡಿತ ಮತ್ತು ದೇಹದ ತಾಪಮಾನವನ್ನು ಪರಿಶೀಲಿಸಿಕೊಳ್ಳಬೇಕು. ಯಾವುದೇ ರೀತಿಯ ಸಮಸ್ಯೆ ಅಥವಾ ಅಸ್ವಸ್ಥತೆ ಕಂಡುಬಂದರೆ  ತಕ್ಷಣ   ವೈದ್ಯರನ್ನು ಸಂಪರ್ಕಿಸಬೇಕು.

ಮನೆಯ ಸದಸ್ಯರು ರೋಗಿಗೆ ಅಗತ್ಯ ವಸ್ತುಗಳನ್ನು ಅವರ ಕೋಣೆಯ ಹೊರಗಿಂದಲೇ ನೀಡುವುದು ಒಳ್ಳೆಯದು. ಅತಿ ಅಗತ್ಯವಿದ್ದರೆ ಮಾತ್ರ ರೋಗಿಯನ್ನು ಭೇಟಿಯಾಗಿ. ನಂತರ ತಕ್ಷಣ ಮಾಸ್ಕ ಹಾಗೂ ಕೈಗಳನ್ನು ತೊಳೆದುಕೊಳ್ಳಿ. ಅವರ ಬಟ್ಟೆಗಳನ್ನು ಬೇರೆಯವರು ಬಳಸಬೇಡಿ.

ಆಮ್ಲಜನಕದ ಪ್ರಮಾಣವು ಶೇಕಡಾ 93 ಕ್ಕಿಂತ ಕಡಿಮೆಯಿದ್ದರೆ, ಎದೆ ನೋವು ಕಾಣಿಸಿಕೊಂಡರೆ ಅಥವಾ  100 ಡಿಗ್ರಿಗಿಂತ ಹೆಚ್ಚಿನ ಜ್ವರ ಇದ್ದರೆ ಎಚ್ಚರಿಕೆ ವಹಿಸಬೇಕು. ಅಂತಹ ಸಂದರ್ಭಗಳಲ್ಲಿ  ಆಸ್ಪತ್ರೆಗೆ ದಾಖಲಾಗುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...