ಬೆಂಗಳೂರಿನಲ್ಲಿ ಕಳೆದ 10 ದಿನದಲ್ಲಿ 286 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. 9 ವರ್ಷದೊಳಗಿನ 85 ಮಕ್ಕಳಿಗೆ, 10 ರಿಂದ 19 ವರ್ಷದೊಳಗಿನ 201 ಮಕ್ಕಳಿಗೆ ಸೋಂಕು ತಗುಲಿದೆ.
ಮಹಾಮಾರಿ ಕೊರೋನಾ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದು, 10 ದಿನದಲ್ಲಿ 286 ಮಕ್ಕಳಿಗೆ ಸೋಂಕು ತಗುಲಿದೆ. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಕೊರೋನಾ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಬೆಂಗಳೂರಲ್ಲಿ 10 ದಿನದಲ್ಲಿ 19 ವರ್ಷದ ಒಳಗಿನ 286 ಮಕ್ಕಳಿಗೆ ಸೋಂಕು ತಗುಲಿದೆ.
ಈಗಾಗಲೇ ಮೂರು ಕೊರೋನಾ ವೈರಸ್ ಅಲೆಗಳನ್ನು ಕಂಡಿರುವ ದಕ್ಷಿಣ ಆಫ್ರಿಕಾದಲ್ಲಿ 4ನೇ ಅಲೆಯಲ್ಲಿ ಒಮಿಕ್ರಾನ್ ಅಬ್ಬರ ಹೆಚ್ಚಾಗಿದೆ. ಮಕ್ಕಳು, ಯುವಕರಿಗೆ ಹೆಚ್ಚಾಗಿ ಸೋಂಕು ತಗಲುತ್ತಿದೆ. ಶಾಲೆಗಳಲ್ಲಿ ಸೋಂಕು ಹೆಚ್ಚಾಗಿದ್ದರಿಂದ ತರಗತಿಗಳನ್ನು ಬಂದ್ ಮಾಡಲಾಗಿದ್ದು, ಆನ್ ಲೈನ್ ತರಗತಿ ನಡೆಸಲಾಗುತ್ತಿದೆ.