alex Certify ಸಮುದಾಯದಲ್ಲಿ ಹರಡ್ತಿದ್ಯಾ ಒಮಿಕ್ರಾನ್, ಆರೋಗ್ಯ ಸಚಿವ ಹೇಳಿದ್ದೇನು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದಾಯದಲ್ಲಿ ಹರಡ್ತಿದ್ಯಾ ಒಮಿಕ್ರಾನ್, ಆರೋಗ್ಯ ಸಚಿವ ಹೇಳಿದ್ದೇನು..?

ಒಮಿಕ್ರಾನ್ ರೂಪಾಂತರವು ಕ್ರಮೇಣ ಸಮುದಾಯಕ್ಕೆ ಹರಡುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಒಮಿಕ್ರಾನ್ ಹಾಗೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ದೆಹಲಿಯು ಹಠಾತ್ ಏರಿಕೆ ಕಂಡಿದೆ. ಗುರುವಾರ ಬೆಳಗ್ಗಿನ ವೇಳೆಗೆ, ರಾಷ್ಟ್ರ ರಾಜಧಾನಿ ದೇಶದಲ್ಲೆ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳನ್ನು ಹೊಂದಿದ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಈ ಬಗ್ಗೆ ಮಾತನಾಡಿರುವ ದೆಹಲಿ ಆರೋಗ್ಯ ಸಚಿವ ವಾಸ್ತವವಾಗಿ, ಈ ರೂಪಾಂತರವು ಕ್ರಮೇಣವಾಗಿ ಸಮುದಾಯದಲ್ಲಿ ಹರಡುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ಅದರ ಪ್ರಮಾಣವು ಹೆಚ್ಚಾಗುತ್ತದೆ, ಎಂದಿದ್ದಾರೆ.

ಮೂರನೇ ವೇವ್ ಬಗ್ಗೆ ಕೇಳಿದಾಗ, ಅವರು ಸಮುದಾಯ ಹರಡುವಿಕೆ ಎಂದರೇನು? ಕೊರೋನಾ ಸಾಮಾನ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ, ಏರೋಸಾಲ್‌ಗಳು ಅಥವಾ ಸ್ಪರ್ಶದ ಮೂಲಕ ಹರಡುತ್ತದೆ. ಸೋಂಕಿತರನ್ನ ಟ್ರ್ಯಾಕ್ ಮಾಡುವ ಮೂಲಕ, ಒಂದು ಕೊರೋನಾ ಚೈನ್ ಅನ್ನು ಕತ್ತರಿಸಬಹುದು. ಆದರೆ ವೈರಸ್ ವ್ಯಾಪಕವಾಗಿ ಹರಡಿ ಸರಪಳಿಯನ್ನು ಗುರುತಿಸಲು ಸಾಧ್ಯವಾಗದಿದ್ದಾಗ, ಅದನ್ನು ಸಮುದಾಯ ಹರಡುವಿಕೆ ಎಂದು ಕರೆಯಲಾಗುತ್ತದೆ. ಇದರರ್ಥ ಸಮುದಾಯದಲ್ಲಿ ವೈರಸ್ ಹರಡುತ್ತಿದೆ ಮತ್ತು ಯಾರಾದರೂ ಸೋಂಕಿಗೆ ಒಳಗಾಗಬಹುದು.

ಡೆಲ್ಟಾ ವೇರಿಯಂಟ್ ನಿಂದ ಭಾರತದಲ್ಲಿ ಎರಡನೇ ಅಲೆ ಸೃಷ್ಟಿಯಾಯ್ತು, ಒಮಿಕ್ರಾನ್ ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ. ವೈಜ್ಞಾನಿಕ ಅಧ್ಯಯನದಿಂದ ಈ ಬಗ್ಗೆ ತಿಳಿದುಕೊಂಡಿದ್ದೇವೆ. ಭಾರತದಲ್ಲಿ ಮೊದಲ ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಒಂದು ತಿಂಗಳ ನಂತರ, ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ ಗುರುವಾರ 961 ಕ್ಕೆ ತಲುಪಿದೆ. ದೆಹಲಿಯಲ್ಲಿನ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಒಳಪಡಿಸಿದಾಗ 46% ರಷ್ಟು ಓಮಿಕ್ರಾನ್ ಪತ್ತೆಯಾಗಿದೆ. ಈ ಜನರಿಗೆ ಯಾವುದೇ ವಿದೇಶ ಪ್ರಯಾಣದ ಇತಿಹಾಸವಿಲ್ಲ, ಅಂತವರ ಸಂಪರ್ಕಕ್ಕು ಬಂದಿಲ್ಲ ಅಂದರೆ ಇದರ ಅರ್ಥವೇನು..?.

ಇದು ಒಮಿಕ್ರಾನ್ ಸಮುದಾಯದಲ್ಲಿ ಹರಡುತ್ತಿರುವುದನ್ನ ಸೂಚಿಸುತ್ತದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ‌. ಈಗಾಗ್ಲೇ ವಿಶ್ವ ಆರೋಗ್ಯ ಸಂಸ್ಥೆಯು ದಕ್ಷಿಣ ಆಫ್ರಿಕಾ ಮತ್ತು ಯುಕೆಯಲ್ಲಿ ಓಮಿಕ್ರಾನ್ ಸಮುದಾಯ ಪ್ರಸರಣವನ್ನು ದೃಢಪಡಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...