ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಲ್ಲಿ ಡೆಲ್ಟಾಕ್ಕಿಂತ ಹೆಚ್ಚು ಸಾಂಕ್ರಾಮಿಕ ರೂಪದ ವೈರಸ್ ಕಂಡುಬಂದಿದೆ. ಬೋಟ್ಸ್ವಾನಾದಲ್ಲಿ ಕಂಡುಬರುವ ರೂಪಾಂತರವು ವೈರಸ್‌ನ ಅತ್ಯಂತ ರೂಪಾಂತರಿತ ರೂಪವಾಗಿದೆ. ಡೆಲ್ಟಾ ನಂತರ ಕಾಣಿಸಿಕೊಂಡಿರುವ ಈ ವೈರಸನ್ನು ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಬಿ.1.1.1.529 ವೈರಸ್, ಹೆಚ್ಚಿನ ಪ್ರಮಾಣದಲ್ಲಿ ಹರಡುವುದ್ರಿಂದ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಓಮಿಕ್ರಾನ್, ಡೆಲ್ಟಾಕ್ಕಿಂತ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು ಎಂದು ಜಾಗತಿಕ ಆರೋಗ್ಯ ಸಂಸ್ಥೆ ಸೂಚಿಸಿದೆ. ಇದುವರೆಗೆ ಈ ರೂಪಾಂತರದ 26 ಪ್ರಕರಣಗಳು ವರದಿಯಾಗಿವೆ. ಬೋಟ್ಸ್ವಾನದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 22 ಮತ್ತು ಹಾಂಕಾಂಗ್ 1 ಪ್ರಕರಣ ಪತ್ತೆಯಾಗಿದೆ. ಈ ರೂಪಾಂತರದಲ್ಲಿ ಇಲ್ಲಿಯವರೆಗೆ 32 ರೂಪಾಂತರಗಳನ್ನು ಗಮನಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬಿ.1.1.1.529 ಸೋಂಕು ನವೆಂಬರ್ 9 ರಂದು ಮೊದಲ ಬಾರಿ ಪತ್ತೆಯಾಗಿದೆ ಎಂದು ಡಬ್ಲ್ಯುಹೆಚ್ ಒ ಹೇಳಿದೆ.
ಓಮಿಕ್ರಾನ್ ಅನ್ನು ಈಗ ಬೆಲ್ಜಿಯಂ, ಹಾಂಕಾಂಗ್ ಮತ್ತು ಇಸ್ರೇಲ್ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಗಮನಿಸಲಾಗಿದೆ. ಡಬ್ಲ್ಯುಹೆಚ್ ಒ ಪ್ರಕಾರ, ಇದರಲ್ಲಿ ಮರುಸೋಂಕಿನ ಅಪಾಯ ಹೆಚ್ಚಿದೆ. ಕೋವಿಡ್-19 ಸೋಂಕಿಗೆ ಒಳಗಾದ ಮತ್ತು ಚೇತರಿಸಿಕೊಂಡ ಜನರು ಇದಕ್ಕೆ ಒಳಗಾಗುವ ಅಪಾಯ ಹೆಚ್ಚಿದೆ.
ಆಫ್ರಿಕಾದ ಬೋಟ್ಸ್ವಾನಾದಲ್ಲಿ ಸಿಕ್ಕ ವೈರಸ್ ಮಾದರಿಯಲ್ಲಿ ಸಂಶೋಧಕರು ಬಿ.1.1.529 ಗಮನಿಸಿದ್ದಾರೆ. ಇದು ಸ್ಪೈಕ್ ಪ್ರೋಟೀನ್‌ನಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ವಿಜ್ಞಾನಿಗಳು ಇನ್ನೂ ಅದರ ಪ್ರಕಾರವನ್ನು ಅಧ್ಯಯನ ಮಾಡುತ್ತಿದ್ದಾರೆ.
ಇದು ಗಂಭೀರವಾದ ಸಮಸ್ಯೆಗೆ ಕಾರಣವಾಗುತ್ತದೆಯೋ ಇಲ್ಲವೋ ಎಂಬ ವಿಷ್ಯ ಹೆಚ್ಚಿನ ಅಧ್ಯಯನದ ನಂತ್ರ ಗೊತ್ತಾಗಬೇಕಿದೆ. ಕೆಲ ಸೋಂಕಿತ ಜನರಿಗೆ ಯಾವುದೇ ರೋಗಲಕ್ಷಣ ಕಂಡು ಬಂದಿಲ್ಲವೆಂದು ದಕ್ಷಿಣ ಆಫ್ರಿಕಾ ವೈದ್ಯರು ಹೇಳಿದ್ದಾರೆ. 27 ದೇಶಗಳ ಯುರೋಪಿಯನ್ ಯೂನಿಯನ್, ದಕ್ಷಿಣ ಆಫ್ರಿಕಾ ಮಧ್ಯೆಯ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಿವೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಸಹ ದಕ್ಷಿಣ ಆಫ್ರಿಕಾದಿಂದ ಬರುವವರಿಗೆ ಪ್ರಯಾಣದ ನಿರ್ಬಂಧಗಳನ್ನು ವಿಧಿಸಿದೆ.