
ಲಿಂಕ್ಡ್ಇನ್ ಬಳಕೆದಾರರು ಆನ್ಲೈನ್ ಮತ್ತು ಆಫ್ಲೈನ್ ರೆಸ್ಟೋರೆಂಟ್ ಆರ್ಡರ್ ಬಿಲ್ಗಳನ್ನು ಹೋಲಿಸಿದ್ದಾರೆ. ಎರಡರ ನಡುವಿನ ಅಚ್ಚರಿ ಮೂಡಿಸುವ ಬೆಲೆಯ ವ್ಯತ್ಯಾಸವನ್ನು ಕಂಡುಹಿಡಿದಿದ್ದಾರೆ.
ಮಾರ್ಕೆಟಿಂಗ್ ಮ್ಯಾನೇಜರ್ ರಾಹುಲ್ ಕಾಬ್ರಾ ಒಂದೇ ರೀತಿಯ ಫುಡ್ ಬಿಲ್ನ ಎರಡು ಇಮೇಜ್ಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವೆಜಿಟೆಬಲ್ ಫ್ರೈಡ್ ರೈಸ್ ಮತ್ತು ಮಶ್ರೂಮ್ ಮೊಮೊಗಳನ್ನು ಒಳಗೊಂಡಿರುವ ಮೆನುವಿನ ಮಾಹಿತಿ ಅದರಲ್ಲಿದೆ.
ಜಿಎಸ್ಟಿ, ಸಿಜಿಎಸ್ಟಿ ಒಳಗೊಂಡಂತೆ ಆಫ್ ಲೈನ್ ಆರ್ಡರ್ಗಳಿಗೆ ಒಟ್ಟು ಶುಲ್ಕ 512 ರೂ. ಇದ್ದರೆ, ಜೊಮಾಟೊದಲ್ಲಿ ಅದೇ ಪದಾರ್ಥ ತರಿಸಿದಾಗ ಶುಲ್ಕ 689.90 ರೂ. ಆಗಿದೆ. ಅದೂ 75 ರೂ. ರಿಯಾಯಿತಿಯನ್ನು ಅನ್ವಯಿಸಿದ ನಂತರ ಇಷ್ಟು ಮೊತ್ತವಾಗಿದೆ. ಜೊಮಾಟೊ ಆ ಆರ್ಡರ್ನಲ್ಲಿ ಶೇಕಡಾ 34.76 ರಷ್ಟು (ರೂ. 178) ಶುಲ್ಕ ವಿಧಿಸಿದೆ.
ಈ ವೆಚ್ಚದ ಹೆಚ್ಚಳಕ್ಕೆ ಮಿತಿ ಹಾಕುವ ಕೆಲಸ ಆಗಬೇಕು, ಸರ್ಕಾರವು ಈ ಕೆಲಸ ಮಾಡಬೇಕೆಂದು ಕಾಬ್ರಾ ಹೇಳಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, 7,600ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು ಸುಮಾರು 1,000 ಕಾಮೆಂಟ್ಗಳು ಬಂದಿವೆ.