ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ಗ್ವಾಲಿಯರ್’ನಲ್ಲಿ ತಿಂಡಿ ಬಿಲ್ ವಿವಾದಕ್ಕೆ ಗಲಾಟೆ ನಡೆದಿದ್ದು, ಕ್ಯಾಂಟೀನ್ ಮಾಲೀಕನೋರ್ವ ಪುಷ್ಪಾ 2’ ಸಿನಿಮಾ ನೋಡಲು ಬಂದ ಪ್ರೇಕ್ಷಕನ ಕಿವಿ ಕಚ್ಚಿದ ಘಟನೆ ನಡೆದಿದೆ.
ಗ್ವಾಲಿಯರ್’ನಲ್ಲಿ ಪುಷ್ಪಾ 2 ಚಲನಚಿತ್ರ ಪ್ರದರ್ಶಿಸುವ ಚಿತ್ರಮಂದಿರದ ಕ್ಯಾಂಟೀನ್ ಮಾಲೀಕ ತಿಂಡಿಗಳ ಬಿಲ್ ಪಾವತಿಸುವ ವಿವಾದಕ್ಕೆ ವ್ಯಕ್ತಿಯೊಬ್ಬರ ಕಿವಿಯನ್ನು ಕಚ್ಚಿದ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಭಾನುವಾರ ಶಬ್ಬೀರ್ ಎಂಬ ವ್ಯಕ್ತಿ ಆಹಾರ ಖರೀದಿಸಲು ಇಂದರ್ಗಂಜ್ ಪ್ರದೇಶದ ಕೈಲಾಶ್ ಟಾಕೀಸ್’ನ ಕ್ಯಾಂಟೀನ್’ಗೆ ಹೋದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶಬ್ಬೀರ್ ಮತ್ತು ಕ್ಯಾಂಟೀನ್ ಮಾಲೀಕ ರಾಜು ನಡುವೆ ವಾಗ್ವಾದ ನಡೆದಿದ್ದು, ಶಬ್ಬೀರ್ ಹಣ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ಯಾಂಟೀನ್ ಮಾಲೀಕರು ಮತ್ತು ಅವರ ಮೂವರು ಸಹಚರರು ಶಬ್ಬೀರ್ ಅವರನ್ನು ಥಳಿಸಿದ್ದಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕುವಾಗ ಅವರ ಕಿವಿಯನ್ನು ಕಚ್ಚಿದ್ದಾರೆ” ಎಂದು ಅವರು ಹೇಳಿದರು.