ಚಿತ್ರದುರ್ಗ : ಮದುವೆ ಎಂದಾಗ ಇತ್ತೀಚಿನ ದಿನಗಳಲ್ಲಿ ಪ್ರಿವೆಡ್ಡಿಂಗ್ ಶೂಟ್ ಸಾಮಾನ್ಯ. ಆದ್ರೆ ಇಲ್ಲೊಂದು ಪ್ರಿ ವೆಡ್ಡಿಂಗ್ ಶೂಟ್ ಎಲ್ಲರನ್ನು ಅಚ್ಚರಿಗೊಳಿಸಿದೆ. ಅಲ್ಲದೇ ಸಾರ್ವಜನಿಕರ ವ್ಯಾಪಕ ಟೀಕೆಗೆ ಕಾರಣವಾಗಿದೆ. ಅಷ್ಟಕ್ಕೂ ನಡೆದಿದ್ದೇನು ಮುಂದೆ ಓದಿ.
ಹೌದು, ಇತ್ತೀಚಿನ ದಿನಗಳಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸೋದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಎಲ್ಲರೂ ನಾವು ಡಿಫರೆಂಟ್ ಆಗಿ ಪ್ರಿ ವೆಡ್ಡಿಂಗ್ ಫೋಟೋ ಅಥವಾ ವಿಡಿಯೋ ಶೂಟ್ ಮಾಡಿಸಬೇಕು ಎಂದು ಡಿಫರೆಂಟ್ ಆಗಿ ಮಾಡುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರಿನಲ್ಲೇ ಜೋಡಿಗಳು ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಜೋಡಿಗಳು ಫೋಟೋಶೂಟ್ ನಡೆಸಿದ್ದಾರೆ. ಗುತ್ತಿಗೆ ಅಧಾರಿತ ವೈದ್ಯ ಡಾ.ಅಭಿಷೇಕ್ ಎಂಬುವವರು ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಪ್ರಿವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿದ್ದಾರೆ.
ಆಪರೇಷನ್ ಥಿಯೇಟರ್ ನಲ್ಲಿ ವ್ಯಕ್ತಿಯೋರ್ವನನ್ನು ಮಲಗಿಸಿ ಆತನಿಗೆ ಆಪರೇಷನ್ ಮಾಡುವಂತೆ ಶೂಟ್ ಮಾಡಿಸಲಾಗಿದೆ. ಡಾ.ಅಭಿಷೇಕ್ ಜೋಡಿಯ ಪ್ರಿವೆಡ್ಡಿಂಗ್ ವಿಡಿಯೋ ವೈರಲ್ ಆಗಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಫೋಟೋಶೂಟ್ ಮಾಡಿಸಲು ಸರ್ಕಾರಿ ಆಸ್ಪತ್ರೆಯೆ ಆಪರೇಷನ್ ಥಿಯೇಟರ್ ಬೇಕಿತ್ತಾ..? ಬೇರೆ ಜಾಗ ಸಿಕ್ಕಿಲ್ವಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.