ಹಿಂದಿ ಬಿಗ್ಬಾಸ್ ಕಾರ್ಯಕ್ರಮ ಯಾರಿಗೆ ಗೊತ್ತಿಲ್ಲ ಹೇಳಿ. ಈ ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಚಿತ್ರ-ವಿಚಿತ್ರ ಆಟಗಳು ಅಷ್ಟೇ, ಕಾಂಟ್ರವರ್ಸಿ ಇರುವ ಕಾರ್ಯಕ್ರಮ. ಇದೇ ಬಿಗ್ ಬಾಸ್ ಕಾರ್ಯಕ್ರಮದ ಸೀಸನ್ 7ರಲ್ಲಿ ನಟಿ ಸೋಫಿಯಾ ಹಯಾತ್ ಕೂಡಾ ಭಾಗವಹಿಸಿದ್ದರು. ಈಗ ನಟಿಯ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಗೆ ಸೇರಿದ್ದಾರೆ.
ನಟಿ ಸೋಫಿಯಾ ಹಯಾತ್, 2016ರಲ್ಲೇ ಸಿನಿ ಜಗತ್ತಿಗೆ ಗುಡ್ಬೈ ಹೇಳಿದ್ದರು. ಆ ನಂತರ ಯುಕೆಯಲ್ಲಿ ಸೆಟಲ್ ಆಗಿರುವ ಇವರು, ಆಧ್ಯಾತ್ಮ ಲೋಕದತ್ತ ವಾಲಿದ್ದರು. ಧ್ಯಾನ, ಪೂಜೆ. ಉಪವಾಸ ಅಂತ ಅದರಲ್ಲೇ ಮಗ್ನರಾಗಿ ಹೋಗಿದ್ದರು. ಇತ್ತೀಚೆಗೆ ಅವರು ಪದೇ ಪದೇ ಉಪವಾಸ ಮಾಡುತ್ತಿದ್ದರಿಂದ ಅವರ ದೇಹದಲ್ಲಿ ಉಪ್ಪಿನ ಅಂಶ ಸಂಪೂರ್ಣವಾಗಿ ಕಡಿಮೆಯಾಗಿದೆ. ನಿಶ್ಯಕ್ತಿಯಿಂದ ಬಳಲುತ್ತಿದ್ದ ಸೋಫಿಯಾ ಮೂರ್ಛೆ ಬಿದ್ದಿದ್ದಾರೆ. ತಕ್ಷಣವೇ ಪರೀಕ್ಷೆ ಮಾಡಿದ ವೈದ್ಯರು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸದ್ಯಕ್ಕೆ ಸೋಫಿಯಾ ಹಯಾತ್ ಚೇತರಿಸಿಕೊಂಡಿದ್ದಾರೆ. ಮಾಧ್ಯಮಗಳಿಗೆ ತಮ್ಮ ಅನಾರೋಗ್ಯದ ಕುರಿತು ಮಾಹಿತಿ ಕೊಟ್ಟಿರುವ ಇವರು, ತಮಗೆ ಕಾಡುತ್ತಿದ್ದ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ. ದೇಹದಲ್ಲಿ ಉಪ್ಪಿನ ಅಂಶ ಕಡಿಮೆ ಆದ್ದರಿಂದ ತಾನು ಎಂತಹ ಸಮಸ್ಯೆ ಎದುರಿಸಿದ್ದೇನೆ. ಈಗ ಉಪವಾಸ ಮಾಡುವುದನ್ನ ಬಿಟ್ಟು ಕಾಲಕಾಲಕ್ಕೆ ಆಹಾರ ಸೇವಿಸುವುದನ್ನ ಅಭ್ಯಾಸ ಮಾಡುತ್ತಿದ್ದೇನೆ ಅಂತ ಕೂಡಾ ಹೇಳಿದ್ಧಾರೆ.
ಅಷ್ಟೇ ಅಲ್ಲ, ‘ನಾನು ಉಪವಾಸದ ಮೂಲಕ ದೇಹವನ್ನು ಶುದ್ಧೀಕರಿಸುವ ಅಭ್ಯಾಸವನ್ನು ಮಾಡುತ್ತಿದ್ದೆ. ಶುದ್ಧೀಕರಣ ಪ್ರಕ್ರಿಯೆಯಲ್ಲಿ ನಾನು ದೇಹದಿಂದ ಬಹಳಷ್ಟು ಲವಣ ಅಂಶ ಮತ್ತು ಎಲೆಕ್ಟ್ರೋಲೈಟ್ಗಳನ್ನ ಕಳೆದುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇಂದು ತುಂಬಾ ಅಪಾಯಕಾರಿಯಾಗಿರೋ ಪ್ರಕ್ರಿಯೆಯಾಗಿದೆ. ಈ ಸಮಯದಲ್ಲಿ ನಾನು ಕನಿಷ್ಠ ಐದು ಪ್ಯಾಕೆಟ್ ಉಪ್ಪು ಸೇವಿಸುವಂತಾಗಿದೆ. ಈಗ ನಾನು ಸುಧಾರಿಸಿಕೊಂಡಿದ್ದೇನೆ ಅಂತ ಸೋಫಿಯಾ ಅವರು ಹೇಳಿದ್ದಾರೆ.
ತಮ್ಮ ಆರೋಗ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರೋ ಸೋಫಿಯಾ, ಉಪವಾಸದಿಂದ ಎದುರಾಗಿದ್ದ ಸಮಸ್ಯೆಯನ್ನ ಹೇಳಿಕೊಂಡಿದ್ದಾರೆ. ಈಗ ನನ್ನ ದೇಹ ಉಪವಾಸ ಮಾಡುವಷ್ಟು ಸಮರ್ಥವಾಗಿಲ್ಲ ಅಂತ ಕೂಡಾ ಹೇಳಿದ್ಧಾರೆ. ಇನ್ನು ಮುಂದೆ ನಾನು ಉಪವಾಸ ಮಾಡುವುದಿಲ್ಲ ಅಂತ ಕೂಡ ಅವರು ಹೇಳಿದ್ದಾರೆ.