alex Certify OMG : ಇದ್ದಕ್ಕಿದ್ದಂತೆ ಜನಪ್ರಿಯ ಗಾಯಕಿಗೆ ಕಿವಿಯೇ ಕೇಳ್ತಿಲ್ಲ ! ಏನಿದು ಅಪರೂಪದ ಖಾಯಿಲೆ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG : ಇದ್ದಕ್ಕಿದ್ದಂತೆ ಜನಪ್ರಿಯ ಗಾಯಕಿಗೆ ಕಿವಿಯೇ ಕೇಳ್ತಿಲ್ಲ ! ಏನಿದು ಅಪರೂಪದ ಖಾಯಿಲೆ..?

ಬಾಲಿವುಡ್ ನ ಜನಪ್ರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಅಪರೂಪದ ಸಂವೇದನಾ ನರ ಶ್ರವಣ ನಷ್ಟದಿಂದ ಬಳಲುತ್ತಿದ್ದಾರೆ.

ಕೆಲವು ವಾರಗಳ ಹಿಂದೆ ತನಗೆ ಸರಿಯಾಗಿ ಕಿವಿ ಕೇಳುತ್ತಿರಲಿಲ್ಲ, ಆದ್ದರಿಂದ 10 ದಿನ ನಿಮ್ಮ ಸಂಪರ್ಕಕ್ಕೆ ಬಂದಿರಲಿಲ್ಲ. ನಂತರ ವೈದ್ಯರಿಗೆ ತೋರಿಸಿದಾಗ ಇದನ್ನು ವೈದ್ಯರು ಅಪರೂಪದ ಕಿವುಡುತನ ಎಂದು ರೋಗನಿರ್ಣಯ ಮಾಡಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಗಾಯಕಿ ಅಲ್ಕಾ ಯಾಗ್ನಿಕ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವೈದ್ಯರು ಈ ಅಪರೂಪದ ಶ್ರವಣ ನಷ್ಟದ ಕಾರಣವನ್ನು ಪತ್ತೆಹಚ್ಚಿದರು. ಇದು ವೈರಲ್ ದಾಳಿಯಿಂದ ಉಂಟಾಗುತ್ತದೆ ಎಂದು ಹೇಳಿದರು. ಈ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಈ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ದೇನೆ, ದಯವಿಟ್ಟು ನನ್ನ ಬಗ್ಗೆ ಕೂಡ ಪ್ರಾರ್ಥಿಸಿ ಎಂದು ಗಾಯಕಿ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...