ಪ್ರಾಣಾಯಾಮ ಯೋಗದ ಬಗ್ಗೆ ಜಾಗೃತಿ ಮೂಡಿಸಲು ವ್ಯಕ್ತಿಯೊಬ್ಬ ತನ್ನ ಮೂಗಿನ ಹೊಳ್ಳೆಗಳ ಮೂಲಕ ಮೂರು ಲಾರಿ ಟ್ಯೂಬ್ಗಳಿಗೆ ಗಾಳಿಯನ್ನು 9 ನಿಮಿಷ 45 ಸೆಕೆಂಡುಗಳಲ್ಲಿ ತುಂಬಿಸಿದ್ದಾರೆ
ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತನೂರ್ ಪ್ರದೇಶದ ಇಳಂಪಿಲ್ಲೈ ಮೂಲದ ನಟರಾಜ್ ಈ ಸಾಧನೆ ಮಾಡಿದ್ದು, ಅವರು ಮೂಲತಃ ಕರಾಟೆ ತರಬೇತುದಾರರಾಗಿದ್ದಾರೆ.
ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ 97 ವಿವಿಧ ದಾಖಲೆ ಪ್ರದರ್ಶನ ನೀಡಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನದಂದು ಅವರು ತಮ್ಮ 98ನೇ ದಾಖಲೆ ಪೂರ್ಣಗೊಳಿಸಿದರು.
ನ್ಯಾಯಾಂಗ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ 9 ನಿಮಿಷ ಮತ್ತು 45 ಸೆಕೆಂಡುಗಳಲ್ಲಿ ಪ್ರದರ್ಶನಗೊಂಡ ಗಾಳಿ ತುಂಬಿಸುವ ಪ್ರತಿಭೆಯನ್ನು ವರ್ಲ್ಡ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿ ಪ್ರಮಾಣೀಕರಿಸಿತು.
ಈಗಾಗಲೇ ಉಸಿರಾಟದ ವ್ಯಾಯಾಮದಲ್ಲಿ ನಿರಂತರ ತೊಡಗಿಸಿಕೊಂಡಿದ್ದರಿಂದ ಈ ಸಾಧನೆ ಸುಲಭ ಆದರೆ, ಸೂಕ್ತ ತರಬೇತಿ ಪಡೆಯದೇ ಇತರರು ಪ್ರಯತ್ನಿಸಿದರೆ ಜೀವಕ್ಕೆ ಅಪಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.