ಕೊಲೆ, ದರೋಡೆ ಮುಂತಾದ ಅಪರಾಧ ಪ್ರಕರಣಗಳ ಸಂಬಂಧ ಕೋರ್ಟ್ ಜನರಿಗೆ ಶಿಕ್ಷೆ ವಿಧಿಸುವುದು ಸಾಮಾನ್ಯ. ಆದರೆ, ಇಲ್ಲಿ ಅಚ್ಚರಿಯ ಘಟನೆಯೊಂದರಲ್ಲಿ ವೃದ್ಧೆಯೊಬ್ಬರನ್ನು ಕೊಂದಿದ್ದ ಕುರಿಗಳ ಗುಂಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೌದು, ಆಫ್ರಿಕಾದ ದಕ್ಷಿಣ ಸುಡಾನ್‌ನ ಲೆಕ್ಸಸ್ ರಾಜ್ಯದ ರಂಬಾಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕುರಿಗಳ ಗುಂಪು ವೃದ್ಧ ಮಹಿಳೆಯ ಎದೆಗೆ ಹಲವು ಬಾರಿ ಹೊಡೆದು ಆಕೆಯ ಪಕ್ಕೆಲುಬುಗಳನ್ನು ಮುರಿದಿದೆ ಎಂದು ವರದಿಯಾಗಿದೆ.
ವೃದ್ಧೆಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ, ಕುರಿಗಳ ಮಾಲೀಕ ಅಮಾಯಕ ಎಂದು ತಿಳಿದು ಬಂದಿದೆ. ಅಲ್ಲಿನ ಕಾನೂನು ಪ್ರಕಾರ, ಸಾಕುಪ್ರಾಣಿಗಳು ವ್ಯಕ್ತಿಯನ್ನು ಕೊಂದರೆ, ಮಾಲೀಕರು ಶಿಕ್ಷೆಯ ಜೊತೆಗೆ ಸಂತ್ರಸ್ತರ ಕುಟುಂಬಕ್ಕೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ.
ಸ್ಥಳೀಯ ನ್ಯಾಯಾಲಯವು ಕೊಲೆ ಮಾಡಿದ ಕುರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರವಾಗಿ 5 ಹಸುಗಳನ್ನು ನೀಡುವಂತೆ ಕುರಿಗಳ ಮಾಲೀಕರಿಗೆ ಸೂಚಿಸಿದೆ.