ವಧು-ವರರು ತಮ್ಮ ವಿವಾಹದ ನಿಯಮಗಳ ಪಟ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ತಮ್ಮ ದೊಡ್ಡ ದಿನದಂದು ನಿಯಮಗಳನ್ನು ಹೊರತಂದಿದ್ದು, ಅದನ್ನು ಅವರು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ.
ವಧು-ವರರ ತಮ್ಮ ಮದುವೆಯ ದಿನದ ನಿಯಮಾವಳಿ ಪ್ರಕಾರ ಹೆಚ್ಚಿನ ಮಕ್ಕಳನ್ನು ವಿವಾಹಕ್ಕೆ ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅತಿಥಿಗಳು ಯಾರೂ ಕೂಡ ಬಿಳಿ ಬಣ್ಣದ ಉಡುಪನ್ನು ಧರಿಸಬಾರದು. ಹಾಗೂ ಮದುವೆಗೆ ಆಹ್ವಾನಿಸದ ಅತಿಥಿಗಳಿಗೆ ನೋ ಎಂಟ್ರಿ ಎಂದು ಹೇಳಿದ್ದಾರೆ.
ಅಂದಹಾಗೆ, ವಧುವಿನ ಗೆಳತಿಯರು ಅವರಿಷ್ಟಪಟ್ಟ ಉಡುಗೆಯೊಂದಿಗೆ ಮದುವೆಗೆ ಬರಬಹುದಾಗಿದೆ. ಈಕೆಯ ಒಡಹುಟ್ಟಿದವರಲ್ಲಿ ಬಹುತೇಕ ಮಂದಿ ಚಿಕ್ಕ ಮಕ್ಕಳಾಗಿರುವುದರಿಂದ ಅವರಿಗೆ ಮಾತ್ರ ಅನುಮತಿ ಇದೆ. ಹಾಗೆಯೇ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದರೆ, ಅಂಥವರು ಮಾತ್ರ ಮದುವೆಗೆ ತಮ್ಮ ಮಕ್ಕಳೊಂದಿಗೆ ಬರಬಹುದು.
ವೈದ್ಯನ ಸೋಗಿನಲ್ಲಿ ಬಂದು ಮಹಿಳೆಯಿಂದ ಸರ ಕಿತ್ತು ಪರಾರಿಯಾದ ಕಳ್ಳ
ಇನ್ನು ಮದುವೆಯಲ್ಲಿ ಬಾರ್ ಅನ್ನೇ ತೆರೆಯಲಾಗುವುದು ಎಂದಿರುವ ವಧು, ಅತಿಥಿಗಳೆಲ್ಲರೂ ಕಂಠಪೂರ ಕುಡಿದು ತೂರಾಡಬಹುದು ಎಂದು ತಿಳಿಸಿದ್ದಾಳೆ. ಹಾಗಂತ ಕುಡಿದು ವಾಹನ ಚಲಾಯಿಸುವಂತಿಲ್ಲ ಎಂಬ ಷರತ್ತು ವಿಧಿಸಿದ್ದಾಳೆ. ಇನ್ನು, ಮದುವೆಯಲ್ಲಿ ಕೆಲಸಕ್ಕೆಂದು ನಿಯೋಜಿಸಲ್ಪಟ್ಟವರನ್ನು ತಮ್ಮ ವಿರಾಮದಲ್ಲಿದ್ದಾಗ ಅತಿಥಿಗಳಾಗಿ ಪರಿಗಣಿಸಲಾಗುತ್ತದೆ. ಅಂದರೆ, ಅವರು ಕೂಡ ಎಲ್ಲರಂತೆ ಭೋಜನ ಸವಿಯಬಹುದು, ಆಲ್ಕೋಹಾಲ್ ಸೇವಿಸಬಹುದು.
ಅಲ್ಲದೆ ಗರ್ಭಿಣಿಯಾಗಿದ್ದವರು ತಮ್ಮ ಮದುವೆಗೆ ಬರುವಂತಿಲ್ಲ ಎಂಬುದು ವಧುವಿನ ಮತ್ತೊಂದು ಷರತ್ತಾಗಿದೆ. ಯಾಕೆಂದ್ರ, ಮದುವೆ ಅಂದ್ರೆ ಪ್ರತಿಯೊಬ್ಬರ ಗಮನವು ವಧು-ವರನ ಮೇಲಿರುತ್ತದೆ. ಹೀಗಾಗಿ ಗರ್ಭಿಣಿಯರು ಬಂದ್ರೆ ಅತಿಥಿಗಳ ಗಮನ ಅತ್ತ ಹೊರಳುತ್ತದೆ ಎಂಬುದು ಈಕೆಯ ಉವಾಚ.
ತಮ್ಮ ಮದುವೆಯ ನಿಯಾಮಾವಳಿ ಮಾಡಿರುವ ವಧು ಜಾಸ್ಮಿನ್ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಇದು ಸುಮಾರು ಎರಡು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.