ಉಕ್ರೇನ್ ಮೇಲೆ ಯುದ್ಧ ಮಾಡ್ತಾ ಇರೋ ರಷ್ಯಾದ ಸೇನೆ ನಡೆಸಿರೋ ಒಂದೊಂದೇ ಪೈಶಾಚಿಕ ಕೃತ್ಯಗಳು ಈಗ ಬಹಿರಂಗವಾಗ್ತಿವೆ. 11 ವರ್ಷದ ಪುಟ್ಟ ಬಾಲಕನ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ಮಾಡಿರೋದು ಬೆಳಕಿಗೆ ಬಂದಿದೆ. ಬಾಲಕನ ತಾಯಿಯನ್ನು ಸೈನಿಕರು ಕುರ್ಚಿಯೊಂದಕ್ಕೆ ಕಟ್ಟಿ ಹಾಕಿ, ಆಕೆಯ ಕಣ್ಣೆದುರಲ್ಲೇ ಇಂತಹ ನೀಚ ಕೆಲಸ ಮಾಡಿದ್ದಾರೆ.
ಈಗಾಗ್ಲೇ ರಷ್ಯಾದ ವಶದಲ್ಲಿರುವ ಉಕ್ರೇನ್‌ನ ಬುಚಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇನ್ನೊಂದೆಡೆ 14 ವರ್ಷದ ಬಾಲಕಿಯೊಬ್ಬಳ ಮೇಲೆ ಕೂಡ ರಷ್ಯಾದ ಯೋಧರು ಬಲಾತ್ಕಾರ ಮಾಡಿದ್ದಾರಂತೆ. ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಉಕ್ರೇನ್‌ನ ಮಾನವ ಹಕ್ಕುಗಳ ಸಂಸದೀಯ ಆಯುಕ್ತ ಲ್ಯುಡ್ಮಿಲಾ ಡೆನಿಸೋವಾ ಹೇಳಿದ್ದಾರೆ.
ಏಪ್ರಿಲ್ 8ರಂದು ರಷ್ಯಾದ ಸೈನಿಕರು ಸುಮಾರು 1.20 ಲಕ್ಷ ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಡೆನಿಸೋವಾ ಮಾಹಿತಿ ನೀಡಿದ್ದಾರೆ. ಇವರಲ್ಲಿ ಹಲವರ ಮೇಲೆ ಅತ್ಯಾಚಾರ ನಡೆದಿದೆ. ಹಲವರನ್ನು ಅಕ್ರಮವಾಗಿ ರಷ್ಯಾ ಗಡಿ ದಾಟಿಸಿರುವುದು ಕೂಡ ಬೆಳಕಿಗೆ ಬಂದಿದೆ.
ಎಪ್ರಿಲ್ 8ರಂದೇ ಉಕ್ರೇನ್‌ನ ಅಪ್ರಾಪ್ತೆ ಹಾಗೂ ವಯೋವೃದ್ಧೆಯೊಬ್ಬಳ ಮೇಲೆ ಕೂಡ ರಷ್ಯಾ ಸೈನಿಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಗುವಿಗೆ ಚಿತ್ರಹಿಂಸೆ ಕೊಡ್ತಾ ಇರೋ ವಿಡಿಯೋವನ್ನು ಸೈನಿಕನೊಬ್ಬ ರಷ್ಯಾದ ಕಾಮ್ರೇಡ್‌ಗೆ ಕಳಿಸಿರೋದು ದೃಢಪಟ್ಟಿದೆ. ಆದ್ರೆ ಎಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂಬುದು ಖಚಿತವಾಗಿಲ್ಲ.