
ಶೆಟೆರೋ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ದೊರೆತಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗುರಿಕಾರ್ತಿ ಮನು ಭಾಕರ್ ಕಂಚಿನ ಪದಕ ಗಳಿಸಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚಿನೊಂದಿಗೆ ಮನು ಭಾಕರ್ ಭಾರತದ ಪದಕ ಖಾತೆ ತೆರೆದಿದ್ದಾರೆ.
ಮನು ಭಾಕರ್ ಕಂಚಿನ ಪದಕ ಗಳಿಸಿದ್ದು, ಈ ಸ್ಪರ್ಧೆಯಲ್ಲಿ 22 ವರ್ಷಗಳ ನಂತರ ಭಾರತದ ಪದಕದ ಬರವನ್ನು ಕೊನೆಗೊಳಿಸಿದೆ.
ದಕ್ಷಿಣ ಕೊರಿಯಾದ ಓಹ್ ಯೆ ಜಿನ್ ಒಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು, ಅವರ ಸಹವರ್ತಿ ಕಿಮ್ ಯೆಜಿ ಬೆಳ್ಳಿ ಪದಕ ಪಡೆದರು.
ಭಾನುವಾರ ಪ್ಯಾರಿಸ್ನಲ್ಲಿ ಒಲಿಂಪಿಕ್ ಕಂಚಿನ ಪದಕವನ್ನು ಗಳಿಸುವ ಮೂಲಕ ಮನು ಭಾಕರ್ ಇತಿಹಾಸವನ್ನು ಬರೆದಿದ್ದಾರೆ. ಹರಿಯಾಣದ 22 ವರ್ಷ ವಯಸ್ಸಿನ ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿದ ನಂತರ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಆಗಿದ್ದಾರೆ.
ಫ್ರೆಂಚ್ ರಾಜಧಾನಿಯ ಚಟೌರೊಕ್ಸ್ ಶೂಟಿಂಗ್ ಸೆಂಟರ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರತಿಭಾವಂತ ಶೂಟರ್ಗಳಲ್ಲಿ ಒಬ್ಬರಾದ ಮನು ಭಾಕರ್ ತಮ್ಮ ಕನಸುಗಳನ್ನು ನನಸಾಗಿಸಿ, ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ.