ಟೋಕಿಯೋ 2020 ಒಲಿಂಪಿಕ್ಸ್ ಅಂತ್ಯಗೊಳ್ಳುತ್ತಿರುವ ಬೆನ್ನಲ್ಲೇ ವಿಶ್ವದೆಲ್ಲೆಡೆ ಕ್ರೀಡಾಜ್ವರ ಹೆಚ್ಚಾದಂತೆ ಕಾಣುತ್ತಿದೆ. ಈ ಜ್ವರವೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಮುಟ್ಟಿದೆ.
ಬಾಹ್ಯಾಕಾಶ ನಿಲ್ದಾಣ ತಲುಪಲು ಹಿಡಿದುಬಂದ ಗಗನ ನೌಕೆಗಳನ್ನು ಆಧರಿಸಿ ಗಗನಯಾನಿಗಳು ತಂಡಗಳನ್ನು ರಚಿಸಿಕೊಂಡು ತಮ್ಮತಮ್ಮಲ್ಲೇ ಆಟಗಳನ್ನು ಆಡಿದ್ದಾರೆ. ನೋ-ಹ್ಯಾಂಡ್‌ಬಾಲ್, ಸಿಂಕ್ರೋನೈಜ್ಡ್ ಫ್ಲೋಟಿಂಗ್‌ನಂಥ ಆಟಗಳನ್ನು ಗಗನಯಾನಿಗಳು ಆಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 16 ಸಾವಿರ ಸಿಬ್ಬಂದಿ ನೇಮಕಾತಿ
ನಾಸಾದ ಗಗನಯಾನಿಗಳಾದ ಶೇನ್ ಕಿಂಬರೋ ಮತ್ತು ಮೆಗನ್ ಮ್ಯಾಕ್ ಆರ್ಥರ್, ಜಪಾನ್‌ನ ಜಕ್ಸಾ ಗಗನಯಾನಿಗಳಾದ ಅಖಿಖೋ ಹೋಶಿಡೆ, ಯೂರೋಪ್ ನ ಥಾಮಸ್ ಪೆಸ್ಕೇ, ರಷ್ಯಾದ ಸೋಯುಜ಼್‌ನ ಮಾರ್ಕ್ ವಂಡೇ ಹೇ, ಹಾಗೂ ರಾಸ್‌ಕಾಸ್ಮೋಸ್‌ನ ಕಾಸ್ಮೋನಾಟ್‌ಗಳಾದ ಒಲೆಗ್ ನೊವಿಟ್‌ಸ್ಕೀ ಮತ್ತು ಪ್ಯೋಟ್ರ್ ಡೊಬ್ರೋವ್ ತಂಡಗಳನ್ನು ಮಾಡಿಕೊಂಡಿದ್ದಾರೆ.
ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ರಷ್ಯಾ, ಕೆನಡಾ, ಜಪಾನ್ ಹಾಗೂ ಯೂರೋಪ್‌ನ ಅನೇಕ ದೇಶಗಳಿಂದ ಬಂದ ಗಗನಯಾನಿಗಳು ಕೆಲಸ ಮಾಡುತ್ತಿದ್ದಾರೆ. ಇದುವರೆಗೂ 3000ಕ್ಕೂ ಹೆಚ್ಚು ವೈಜ್ಞಾನಿಕ ತನಿಖೆಗಳನ್ನು ನಡೆಸಿರುವ ನಿಲ್ದಾಣದಲ್ಲಿ 19 ದೇಶಗಳ ಜನರು ಈ ವಿಶಿಷ್ಟ ಕಿರುಗುರುತ್ವಾಕರ್ಷಣಾ ಪ್ರಯೋಗಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.