ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್ಲಿಫ್ಟರ್ ಮೀರಾಬಾಯ್ ಚಾನು ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸುತ್ತಲೇ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ.
ವೇಟ್ ಲಿಫ್ಟಿಂಗ್ನಲ್ಲಿ 21 ವರ್ಷಗಳ ಬಳಿಕ ಮೊದಲ ಬಾರಿಗೆ ದೇಶಕ್ಕೆ ಪದಕ ತಂದುಕೊಟ್ಟ 26 ವರ್ಷದ ಚಾನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ’ಭಾರತ್ ಮಾತಾ ಕೀ ಜೈ’ ಘೋಷಗಳನ್ನು ಕೂಗಿ ಸ್ವಾಗತಿಸಲಾಯಿತು.
ALERT: ಜು. 30 ರವರೆಗೆ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
“ಒಲಂಪಿಕ್ಸ್ನಲ್ಲಿ ಪದಕ ಗೆದ್ದಿದ್ದು ಕನಸು ನಿಜವಾದಂತೆ ಭಾಸವಾಗಿದೆ. ಇಷ್ಟೆಲ್ಲಾ ಪ್ರೀತಿ ಹಾಗೂ ಬೆಂಬಲದ ನಡುವೆ ಇಲ್ಲಿಗೆ ಬಂದಿಳಿಯುತ್ತಿರುವುದು ಖುಷಿಯ ವಿಚಾರವಾಗಿದೆ” ಎಂದು ಮಾಧ್ಯಮಗಳೊಂದಿಗೆ ಚಾನು ಹೇಳಿಕೊಂಡಿದ್ದಾರೆ.