ಒಲಂಪಿಕ್ ಮತ್ತು ಹಾಕಿ ವಿಶ್ವಕಪ್ ಪದಕ ವಿಜೇತ ತಂಡದ ಸದಸ್ಯರಾಗಿದ್ದ ವರಿಂದರ್ ಸಿಂಗ್ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. 75 ವರ್ಷದ ವರಿಂದರ್ ಸಿಂಗ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
1972 ರ ಮ್ಯೂನಿಚ್ ಒಲಂಪಿಕ್ಸ್ ಸಂದರ್ಭದಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗಳಿಸಿದ್ದು, ಆಂಸ್ಟರ್ಡ್ಯಾಮ್ ದಲ್ಲಿ ನಡೆದ 1973 ರ ಹಾಕಿ ವಿಶ್ವಕಪ್ ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗಳಿಸಿದ್ದು ಎರಡೂ ತಂಡಗಳಲ್ಲಿ ಭಾರತದ ಪರ ವರಿಂದರ್ ಸಿಂಗ್ ಆಟವಾಡಿದ್ದರು.
ಮಲೇಷ್ಯಾದ ಕ್ವಾಲಾಲಂಪುರ ನಲ್ಲಿ 1975 ರಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್ ನಲ್ಲಿ ಭಾರತ ತಂಡ ಚಿನ್ನದ ಪದಕವನ್ನು ಗಳಿಸಿದ್ದು, ಈ ಸಂದರ್ಭದಲ್ಲಿ ವರಿಂದರ್ ಸಿಂಗ್ ತಂಡದ ಸದಸ್ಯರಾಗಿದ್ದರು. ವರಿಂದ ರ್ ಸಿಂಗ್ ಅವರ ನಿಧನಕ್ಕೆ ಗಣ್ಯಾತಿಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.