ಬ್ರಿಟನ್ನಿಂದ ರಷ್ಯಾದವರೆಗೂ 2000 ಕಿಮೀ ದೂರ ಕ್ರಮಿಸಿ ’ಒಲಿಂಪಿಕ್’ ಬಿರುದು ಪಡೆದ ಬಾವಲಿಯೊಂದು ಪುಟ್ಟ ಊರೊಂದರಲ್ಲಿ ಬೆಕ್ಕಿನ ದಾಳಿಗೆ ಮೃತಪಟ್ಟಿದೆ.
ರಷ್ಯಾದ ಸ್ಕೋವ್ ಪ್ರದೇಶದ ಮೊಲ್ಗಿನೋ ಎಂಬ ಹಳ್ಳಿಯಲ್ಲಿದ್ದ ವೇಳೆ ಬೆಕ್ಕೊಂದರಿಂದ ದಾಳಿಗೊಳಗಾದ ಬಾವಲಿ, ಪುನಶ್ಚೇತನ ಕೇಂದ್ರವೊಂದರಲ್ಲಿ ಕೊನೆಯುಸಿರೆಳೆದಿದೆ.
ಗಮನಿಸಿ…! ಎರಡು ದಿನ ಭಾರೀ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ –ಕರಾವಳಿಯಲ್ಲಿ ಭಾರಿ ಗಾಳಿ
’ನಾತುಸಿಯಸ್ ಪಿಪಿಸ್ಟ್ರೆಲ್ಲೆ’ ಎಂಬ ತಳಿಯ ಈ ಬಾವಲಿ ಮಾನವನ ಹೆಬ್ಬೆರಳಿನಷ್ಟು ಗಾತ್ರದ್ದಾಗಿದೆ. ಈ ಬಾವಲಿಯ ರೆಕ್ಕೆಯೊಂದಕ್ಕೆ ಲಂಡನ್ನ ಮೃಗಾಲಯದ ಪುಟ್ಟದೊಂದು ಉಂಗುರ ತೊಡಿಸಲಾಗಿತ್ತು.
ಬ್ರಿಟನ್ನಲ್ಲಿರುವ 17 ತಳಿಗಳ ಬಾವಲಿಗಳ ಪೈಕಿ ನಾತುಸಿಯಸ್ ಪಿಪಿಸ್ಟ್ರೆಲ್ಲೆ ಸಹ ಒಂದಾಗಿದ್ದು, ಕೇವಲ 8 ಗ್ರಾಂ ತೂಗುತ್ತದೆ.