ಆಲಿವ್ ಎಣ್ಣೆಯನ್ನು ಆಲಿವ್ ನಿಂದಲೇ ತಯಾರಿಸಲಾಗುತ್ತದೆ. ತ್ವಚೆಯ ಸೌಂದರ್ಯಕ್ಕೆ, ಆರೋಗ್ಯಕ್ಕೆ ಹಾಗೂ ಅಡುಗೆ ಮನೆಯಲ್ಲಿ ಇದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ.
ಆಲಿವ್ ಎಣ್ಣೆಯನ್ನು ನೋವು ನಿವಾರಕವಾಗಿಯೂ ಬಳಸುತ್ತಾರೆ. ಗಂಟು ನೋವಿಗೆ ಈ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಹೆಚ್ಚಿನ ನೋವು ಕಡಿಮೆಯಾಗುತ್ತದೆ.
ಮೂಳೆಗಳನ್ನು ಗಟ್ಟಿಗೊಳಿಸಲೂ ಇದು ಸಹಕಾರಿ. ಆಲಿವ್ ಎಣ್ಣೆಯನ್ನು ಆಹಾರದ ರೂಪದಲ್ಲಿ ಸೇವಿಸುವುದರಿಂದ ನಿಮ್ಮ ಮೂಳೆಗಳು ಮತ್ತಷ್ಟು ದೃಢವಾಗಿ ಗಟ್ಟಿಯಾಗುತ್ತವೆ. ಇದನ್ನು ಆಹಾರದಲ್ಲಿ ಬಳಸಿದರೆ ಕೊಲೆಸ್ಟ್ರಾಲ್ ಸಮಸ್ಯೆ ನಿಮ್ಮಿಂದ ದೂರ ಓಡಿ ಹೋಗುತ್ತದೆ. ಹೃದಯದ ಕಾಯಿಲೆಗಳ ಆಪಾಯವನ್ನೂ ಕಡಿಮೆ ಮಾಡುತ್ತದೆ.
ತೂಕ ಇಳಿಸಲು ನೆರವಾಗುವ ಇದು, ಮಾನಸಿಕ ಒತ್ತಡ ಹಾಗೂ ಕಿರಿಕಿರಿಗಳಿಂದ ರಿಲ್ಯಾಕ್ಸ್ ನೀಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣವೂ ಇದಕ್ಕಿದೆ. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಆಲಿವ್ ಆಯಿಲ್ ಹೆಚ್ಚು ಉಪಕಾರಿ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.