
ಕೋವಿಡ್-19 ಲಸಿಕೆ ಕಾರ್ಯಕ್ರಮ ದೇಶಾದ್ಯಂತ ಭರದಿಂದ ಸಾಗುತ್ತಿದೆ. ಈ ವೇಳೆಯಲ್ಲಿಯೂ ಸಹ ಬಹಳಷ್ಟು ಮಂದಿಗೆ ಲಸಿಕೆ ಪಡೆಯಲು ಕಿರಿಕಿರಿ ಎಂಬಂತೆ ತೋರುತ್ತಿದೆ.
ಇಂಥ ಮಂದಿಗೆ ಪ್ರೇರಣೆ ತುಂಬುವ ಘಟನೆಯೊಂದರಲ್ಲಿ, ವಾರಣಾಸಿಯ 125 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೋವಿಡ್-19 ಲಸಿಕೆ ಪಡೆದಿದ್ದಾರೆ. ನಗರದ ದುರ್ಗಾ ಕುಂಡದಲ್ಲಿರುವ ಲಸಿಕಾ ಕೇಂದ್ರಕ್ಕೆ ಧಾವಿಸಿದ ಸ್ವಾಮಿ ಶಿವಾನಂದರು, ತಮ್ಮ ಆಧಾರ್ ಕಾರ್ಡ್ ತೋರಿಸಿದ್ದು, ಅದರಲ್ಲಿ ಅವರ ಜನ್ಮದಿನ ಆಗಸ್ಟ್ 8, 1896 ಎಂದು ಕಂಡುಬಂದಿದೆ.
ಐವರು ಹೆಣ್ಣು ಮಕ್ಕಳೊಂದಿಗೆ ಸಾವಿಗೆ ಶರಣಾದ ತಾಯಿ
ಇಲ್ಲಿನ ಕಬೀರ್ ನಗರ ಕಾಲೋನಿಯ ಭೇಲ್ಪುರ ಪ್ರದೇಶದ ಶಿವಾನಂದ, ಲಸಿಕೆ ಪಡೆಯಲು ಆಗಮಿಸಿ, ಎಲ್ಲರಂತೆ ಸರತಿಯಲ್ಲಿ ಕಾದು ನಿಂತು ಡೋಸ್ ಪಡೆದು ಮನೆಗೆ ತೆರಳಿದ್ದಾರೆ.
ತಮ್ಮ ದೀರ್ಘಾಯುಷ್ಯದ ಬಗ್ಗೆ ಮಾತನಾಡಿರುವ ಶಿವಾನಂದ, “ಮುಂಜಾನೆ 3 ಗಂಟೆ ಎದ್ದೇಳುವ ನಾನು ಗಂಗಾ ನದಿಗೆ ಸ್ನಾನ ಮಾಡಲು ತೆರಳುತ್ತೇನೆ. ಯೋಗ ಮಾಡುತ್ತೇನೆ. ತೈಲ ಹಾಗೂ ಮಸಾಲೆರಹಿತವಾದ ಸರಳ ಆಹಾರ ಸೇವನೆ ಮಾಡುತ್ತೇನೆ. ಬಹಳ ಬಡ ಕುಟುಂಬದಿಂದ ಬಂದ ನಾನು ಎಂದಿಗೂ ಪೂರ್ತಿ ಆಹಾರ ಸೇವನೆ ಮಾಡಿಲ್ಲ. ನನ್ನ ಹೊಟ್ಟೆಯ ಸಾಮರ್ಥ್ಯದ ಅರ್ಧದಷ್ಟನ್ನು ಮಾತ್ರವೇ ಊಟ ಮಾಡುತ್ತೇನೆ” ಎನ್ನುತ್ತಾರೆ.
ಕಾಣೆಯಾಗಿದ್ದ ದೆಹಲಿಯ ರ‍್ಯಾಪರ್ ವಾರದ ಬಳಿಕ ಪತ್ತೆ
ತಮ್ಮೆಲ್ಲಾ ಕೆಲಸಗಳನ್ನು ಖುದ್ದು ಮಾಡಿಕೊಳ್ಳುವ ಶಿವಾನಂದ ಯಾವುದಕ್ಕೂ ಕುಟುಂಬಸ್ಥರನ್ನು ಅವಲಂಬಿಸಿಲ್ಲ. ಮುಂದಿನ ತಿಂಗಳು ಕೋವಿಡ್‌ನ ಎರಡನೇ ಡೋಸ್ ಲಸಿಕೆ ಪಡೆಯಲು ಎದುರು ನೋಡುತ್ತಿದ್ದಾರೆ ಶಿವಾನಂದ. ಇವರಿಗೂ ಮುನ್ನ ಜಮ್ಮು & ಕಾಶ್ಮೀರದ ಉಧಂಪುರದ 120 ವರ್ಷ ವಯಸ್ಸಿನ ಧೋಲಿ ದೇವಿಯವರು ಕೋವಿಡ್ ಲಸಿಕೆ ಪಡೆದಿದ್ದರು.